National

ಹಿಜಾಬ್​ ವಿವಾದ: ಮುಂದಿನ ಚುನಾವಣೆಗೆ ಲಾಭ ಪಡೆಯುವ ದುರುದ್ದೇಶ-ಮಾಜಿ ಪ್ರಧಾನಿ

ದೆಹಲಿ:(Delhi)  ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್​ ವಿವಾದ ಈಗಾಗಲೇ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಈ ಪ್ರಕರಣ ಈಗಾಗಲೇ ಸಂಸತ್​​ನಲ್ಲೂ ಚರ್ಚೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು(Devegowda) ಪ್ರತಿಕ್ರಿಯೆ ನೀಡಿದ್ದಾರೆ.

ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿರುವ ದೇವೇಗೌಡರು 2023ರ ವಿಧಾನಸಭೆ(Vidhanasabhe election) ಚುನಾವಣೆಗೋಸ್ಕರ ಹಿಜಾಬ್​ ವಿವಾದವನ್ನ ವಿವಿಧ ರಾಜಕೀಯ ಪಕ್ಷಗಳು ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಕೆಲವೊಂದು ದುಷ್ಟ ಹಿತಾಸಕ್ತಿಗಳ ಕೈವಾಡವಿದ್ದು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಪಕ್ಷಗಳನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿವೆ. ದೇಶವನ್ನು ಒಡೆಯಲು ಪಿತೂರಿ ನಡೆಯುತ್ತಿದೆ. ಕೂಡಲೇ ಇಂತಹ ವಿಷಮ ಪರಿಸ್ಥಿತಿಯನ್ನು ತಿಳಿಗೊಳಿಸದೆ ಇದ್ದರೆ ಇದರ ಪರಿಣಾಮ ಬಹಳ ಗಂಭೀರವಾಗಿರುತ್ತದೆ ಎಂದಿದ್ದಾರೆ

ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಈ ವಿವಾದಕ್ಕೆ ಅಲ್ಲಿನ ರಾಜಕೀಯ ಸಂಘಟನೆವೊಂದು ವಿವಾದದ ಕಿಡಿ ಹೊತ್ತಿಸಿದ್ದು, ಇದೀಗ ವಿವಿಧ ಪಕ್ಷಗಳು ಇದರ ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ವಿವಾದವನ್ನ ತಕ್ಷಣವೇ ಹತ್ತಿಕ್ಕಬೇಕು ಎಂದು ದೇವೇಗೌಡರು ಸಲಹೆ ನೀಡಿದ್ರು.

Share Post