CrimeNational

ಹೈದರಾಬಾದ್‌ನಲ್ಲಿ ರಿಯಲ್‌ ಎಸ್ಟೇಟ್‌ ವಾರ್‌; ಗುಂಡೇಟಿಗೆ ಓರ್ವ ಬಲಿ

ಹೈದರಾಬಾದ್‌; ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಮಾದಾಪುರದಲ್ಲಿ ಇಸ್ಮಾಯಿಲ್‌ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಇನ್ನೂ ಒಬ್ಬ ವ್ಯಕ್ತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಯಲ್‌ ಎಸ್ಟೇಟ್‌ ದಂಧೆಕೋರರ ನಡುವೆ ಈ ಗುಂಡಿನ ಚಕಮಕಿ ನಡೆದಿದ್ದು, ಇಸ್ಮಾಯಿಲ್‌ ಅದರಲ್ಲಿ ಸಾವನ್ನಪ್ಪಿದ್ದಾನೆ. ಮುಜೀಬ್‌ ಎಂಬಾತನೇ ಕೊಲೆಗಾರ ಎಂದು ತಿಳಿದುಬಂದಿದೆ. ಜಾಗದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಮುಜೀಬ್‌ ತನ್ನ ಬಳಿ ಇದ್ದ ರಿವಾಲ್ವಾರ್‌ನಿಂದ ಇಸ್ಮಾಯಿಲ್‌ ಮೇಲೆ ಫೈರ್‌ ಮಾಡಿದ್ದಾನೆ. ಇಸ್ಮಾಯಿಲ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಸ್ಮಾಯಿಲ್‌ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಾದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post