ಅತಿಹೆಚ್ಚು ಟೀ ಬ್ಯಾಗ್ ಸೇವನೆ ಇದ್ಯಾ..ಹಾಗಾದ್ರೆ ಅನಾಹುತ ತಪ್ಪಿದ್ದಲ್ಲ
ಕೆಲವರಿಗೆ ಬೆಳಗ್ಗೆ ಎದ್ದ ಕೂಡಲೇ..ಟೀ ಕುಡಿಬೇಕಕು ಅಥವಾ ಏನಾದ್ರೂ ಕೆಲಸ ಮಾಡೋಕು ಮುಂಚೆ ಟೀ ಕುಡಿಯಲಿಲ್ಲ ಅಂದ್ರೆ ಕೆಲಸ ಮಾಡೋಕೆ ಮೂಡ್ ಇರಲ್ಲ.. ಹಾಗಾಗಿ ಇಂದು ಥಟ್ ಅಂತ ಕೈಗೆಟುಕುವ ಹಾಗೆ ಚಹ ತಯಾರಿಕೆಗೆ ಮಾರುಕಟ್ಟೆಯಲ್ಲಿ ಟೀ ಬ್ಯಾಗ್‌ಗಳು ಲಭ್ಯ ಇವೆ. ಮನೆಯಲ್ಲಿ ನಮಗೆ ಇಷ್ಟವಾದ ಟೀ ಪುಡಿಯೊಂದಿಗೆ ಚಹ ಮಾಡ್ಕೊಂಡು ಕುಡಿದರೆ ಪರವಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಬ್ರಾಂಡ್‌ಗಳ ಟೀ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಚಹಾ ಮಾಡಲು ಸಮಯ ಮತ್ತು ತಾಳ್ಮೆಯ ಎರಡೂ ಇಲ್ಲದೆ ಅನೇಕ ಜನರು ಟೀ ಬ್ಯಾಗ್‌ಗೆ ಹೆಚ್ಚಿನ ಮತ ನೀಡುತ್ತಿದ್ದಾರೆ.
ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದರೂ, ಬ್ಯಾಗ್ ನಲ್ಲಿ ಶೇಖರಿಸಿಟ್ಟ ಟೀ ತಯಾರಿಸಿ ಕುಡಿಯುವುದರಿಂದ ಅನಾರೋಗ್ಯಕ್ಕೆ ತುತ್ತಾಗಬಹುದು ಎಂಬುದನ್ನು ಗಮನದಲಿಟ್ಟಕೊಳ್ಳಬೇಕು. ನೀರು ಕುದಿಸಿ ಹಾಲು ಹಾಕಿ ಟೀ ಪುಡಿ ಹಾಕಿ ಅಬ್ಬಬ್ಬಾ..ಇಷ್ಟಲ್ಲಾ ಕಷ್ಟ ಪಡುವ ಬದಲಿಗೆ ಮಾರುಕಟ್ಟೆಯಲ್ಲಿ ದುರೆಯುವ ಬ್ಲಾಕ್ ಟೀ, ಗ್ರೀನ್ ಟೀಯಂಥಹ ವಿಷಕಾರಿ ಬ್ಯಾಗ್‌ಗಳ ಮೊರೆ ಹೋಗಿ ಜನ ತಮ್ಮ ಜೀವನವನ್ನು ನರಕಕ್ಕೆ ತಳ್ಳಿಕೊಳ್ಳುತ್ತಿದ್ದಾರೆ. ಹಣಕೊಟ್ಟು ಖರೀದಿಸಿ ತಮ್ಮ ಆರೋಗ್ಯವನ್ನು ಅನಾರೋಗ್ಯಕ್ಕೆ ನೂಕುತ್ತಿದ್ದಾರೆ.
ಮೈಕ್ರೋಪ್ಲಾಸ್ಟಿಕ್ ನಿಂದ ತಯಾರಿಸಲಾದ ಈ ಟೀ ಬ್ಯಾಗ್ ಗಳ ಸೇವನೆಯಿಂದ ನ್ಯಾನೊಪ್ಲಾಸ್ಟಿಕ್ ಕಣಗಳು ಬಿಡುಗಡೆಯಾಗುತ್ತವೆ. ಬಿಸಿ ಹಾಲು, ನೀರಿನಲ್ಲಿ ಈ ಬ್ಯಾಗ್‌ಗಳನ್ನು ಇಟ್ಟಾಗ, ನೀರಿನಲ್ಲಿ ಹಾನಿಕಾರಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ನಾವು ಅವುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ರಾಸಾಯನಿಕಗಳು ಕ್ಯಾನ್ಸರ್ಗೆ ಕಾರಣವಾಗುವ ಕಾರ್ಸಿನೋಜೆನ್ಗಳ ಪಟ್ಟಿಗೆ ಸೇರಿವೆ. ಈ ಕಾರ್ಸಿನೋಜನ್ ನಮ್ಮ ಕಣ್ಣಿಗೆ ಕಾಣದಿದ್ದರೂ ಟೀ ಬ್ಯಾಗ್‌ನ ಒಳಗಡೆ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ