ಪಂಜಾಬ್‌ನಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಬಾವುಟ ಎಸೆತ
ಲೂಧಿಯಾನಾ: ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲು ಪಂಜಾಬ್‌ಗೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರಿಗೆ ಮೇಲೆ ಯುವಕನೊಬ್ಬ ಬಾವುಟ ಎಸೆದಿದ್ದಾರೆ. ಹಲ್ವಾರಾದಿಂದ ಲೂಧಿಯಾನಾದ ಹಯಾತ್ ರಿಜೆನ್ಸಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಭದ್ರತಾ ಲೋಪದಿಂದ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಪಂಜಾಬ್ ಭೇಟಿ ವೇಳೆಯೂ ಭದ್ರತಾ ಲೋಪವಾಗಿತ್ತು. ಇದೀಗ ರಾಹುಲ್ ಗಾಂಧಿ ಭೇಟಿ ವೇಳೆಯೂ ಭದ್ರತಾ ಲೋಪವಾಗಿದೆ.
ಕಾರಿನಲ್ಲಿ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಇದ್ದರು. ಕಾಂಗ್ರೆಸ್ ನಾಯಕ ಸುನಿಲ್ ಜಾಖಡ್ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ್ದೇ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐನ ಕಾರ್ಯಕರ್ತ ಬಾವುಟವನ್ನು ಸಿಟ್ಟಿನಿಂದ ರಾಹುಲ್ ಮೇಲೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.