400 ಎಕರೆ ಗೋಮಾಳ ಒತ್ತುವರಿ ತೆರವು; ಕೋಟ್ಯಂತರ ರೂ. ಆಸ್ತಿ ಸರ್ಕಾರದ ವಶ
ಕೋಲಾರ; ಗೋಮಾಳ ಜಾಗವನ್ನು ಒತ್ತುವರಿ ಮಾಡಿಕೊಂಡು ಪ್ರಾರ್ಥನಾ ಕೇಂದ್ರ ನಡೆಸುತ್ತಿದ್ದ ಸ್ಥಳವನ್ನು ಇಂದು ತೆರವು ಮಾಡಲಾಗಿದೆ. ಕೋಲಾರ ತಾಲ್ಲೂಕಿನ ಮಂಗಸಂದ್ರ ಗ್ರಾಮದ ಸರ್ವೇ ನಂಬರ್ 94ರಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಒಟ್ಟು 400 ಎಕರೆ ಗೋಮಾಳವಿದ್ದು, ಇದನ್ನೆಲ್ಲಾ ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಹೈಕೋರ್ಟ್ ಒತ್ತುವರಿ ತೆರವುಗೊಳಿಸಿ, ಗೋಮಾಳ ಜಾಗವನ್ನು ವಶಪಡಿಸಿಕೊಳ್ಳಬೇಕೆಂದು ಕೋಲಾರ ತಾಲ್ಲೂಕು ಆಡಳಿತಕ್ಕೆ ನಿರ್ದೇಶನ ನೀಡಿತ್ತು.
ಅದರಂತೆ ಇಂದು ಜೆಸಿಬಿಗಳ ಜೊತೆ ಬಂದ ತಾಲ್ಲೂಕು ಕಚೇರಿಯ ಸಿಬ್ಬಂದಿ ಅಕ್ರವಾ ಒತ್ತುವರಿಯನ್ನು ತೆರವು ಮಾಡಿದಾರೆ.