ಪರ್ಸೆಂಟೇಜ್ ಇಓ: 30% ಕಮಿಷನ್ ಕೊಟ್ರೆನೆ ನಿಮ್ಮ ಕೆಲಸ ನಡೆಯುತ್ತೆ
ಮಂಡ್ಯ: ಕಮಿಷನ್ ಕೊಟ್ರೆ ಮಾತ್ರ ನಿಮ್ಮ ಕೆಲಸಗಳು ನಡೆಯುತ್ತವೆ ಎಂದು ಶ್ರೀರಂಗಪಟ್ಟಣದ ಕಾರ್ಯ ನಿರ್ವಾಹಕ ಅಧಿಕಾರಿ ಹಗಲು ದರೋಡೆಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಓ ಭೈರಪ್ಪ ಇಂತಹ ಹೇಯ ಕೆಲಸಕ್ಕೆ ಕೈ ಹಾಕಿದ್ದ ಶ್ರೀರಘಮಪಟ್ಟಣದ ಪಿಡಿಓಗಳಿಗೆ ಇನ್ನಿಲ್ಲದ ಕಿರುಕುಳ ನೀಡ್ತಿದ್ದಾನಂತೆ. ತಾಲೂಕಿನಲ್ಲಿ ಯಾವುದೇ ಬಿಲ್ ಮಂಜೂರು ಮಾಡಬೇಕು ಅಂದ್ರೆ ಮೊದಲು ಪರ್ಸೆಂಟೇಜ್ ಕೊಟ್ಟು ಮಾತಾಡಬೇಕಂತೆ ಇಲ್ಲವಾದಲ್ಲಿ ಆ ಫೈಲ್ ಹಾಗೇ ಪೆಂಡಿಂಗ್ ಉಳಿಯುತ್ತದೆ ಎಂದು ಪಿಡಿಓಗಳು ಆರೋ ಮಾಡ್ತಿದ್ದಾರೆ.
ಇ-ಸ್ವತ್ತು ಮಾಡಿಸುವವರಿಂದ ಹಣ ಪಡೆದು ನನಗೆ ನೀಡಿ ಎಂದು ನೇರವಾಗಿ ಹಣಕ್ಕೆ ಬೇಡಿಕೆ ಇಡುತ್ತಾರೆಂದು ನೇರ ಆರೋಪ ಮಾಡಿದ್ದಾರೆ. ಹಣಬಾಕ ಇಓ ವಿರುದ್ಧ ಸಿಇಓಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನ ಇಲ್ಲ ಅಂತಾರೆ ಪಿಡಿಓಗಳು. ಜಿಲ್ಲಾ ಪಂಚಾಯತ್ ಸಿಇಓಗೆ ಈ ಬಗ್ಗೆ ದೂರು ನೀಡಿ ಒಂದೂವರೆ ತಿಂಗಳು ಕಳೆದಿವೆ. ಅಲ್ಲಿಂದ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸಿಇಓ ವಿರುದ್ಧ ಕೂಡ ಆರೋಪಿಸಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಇಓ ದಿವ್ಯಾ ಪ್ರಭು ಅವರ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ಪಿಡಿಓಗಳು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ಒಂದು ಸಮಿತಿಯನ್ನು ಕೂಡ ರಚಿಸಿದ್ದು ವರದಿ ಸಲ್ಲಿಸಲು ಆದೇಶ ನೀಡಲಾಗಿದೆ. ಅಧಿಕಾರಿಗಳು ವರದಿ ಸಿದ್ದಪಡಿಸಿ ಕೊಟ್ಟಿದ್ದಾರೆ. ಇದರಲ್ಲಿ ಇಓ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬುದು ಸಾಬೀತಾಗಿದೆ. ಈ ವರದಿಯನ್ನು ನಾನು ಸರ್ಕಾರಕ್ಕೆ ಒಪ್ಪಿಸುತ್ತೇನೆ. ಇಓ ಅಮಾನತು ಮಾಡಬೇಕೆಂದು ಮನವಿ ಕೂಡ ಮಾಡುತ್ತೇನೆ. ರಿಲೀಸ್ ಆಗಿರುವ ಆಡಿಯೋದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ನಾನು ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳನ್ನಷ್ಟೇ ಮಾಡಿದ್ದೇನೆ. ಬೇರೆ ಯಾವುದೇ ಯೋಜನೆ ಮಾಡಿಲ್ಲ ಎಂದು ಮಂಡ್ಯ ಸಿಇಓ ದಿವ್ಯಾ ಪ್ರಭು ಉತ್ತರಿಸಿದ್ದಾರೆ.