National

ಓವರ್‌ಟೇಕ್‌ ಮಾಡಿದ್ದೇ ತಪ್ಪಾಯ್ತು; ಬಸ್‌ ಚಾಲಕನ ತಲೆಗೆ ಬಂದೂಕು..!

ಮುಂಬೈ: ಓವರ್‌ ಟೇಕ್‌ ಮಾಡಿದ್ದಕ್ಕೆ ಬಸ್‌ ಚಾಲಕನ ಮೇಲೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ದರ್ಪ ತೋರಿಸಿದ್ದು, ರಿವಾಲ್ವಾರ್‌ ತೋರಿಸಿ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಸದ್ಯ ಬಸ್‌ ಚಾಲಕನಿಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯ ಬದ್ಖಾಲ್ ಬಳಿ ಈ ಘಟನೆ ನಡೆದಿದ್ದು, ಬಸ್‌ನಲ್ಲಿದ್ದವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.  ಬಸ್ ಚಾಲಕ ಕಾರನ್ನು ಓವರ್ ಟೇಕ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಕಾರು ಚಾಲಕ ಬಸ್ ಚಾಲಕನಿಗೆ ಬಸ್ ನಿಲ್ಲಿಸುವಂತೆ ಸೂಚಿಸಿದ್ದಾನೆ. ಆದರೆ ಬಸ್ ಚಾಲಕ ನಿಲ್ಲಿಸದೇ ಮುಂದೆ ಹೋಗಿದ್ದಾನೆ. ಇದ್ರಿಂದ ಮತ್ತಷ್ಟು ಕೋಪಗೊಂಡ ಕಾರು ಚಾಲಕ, ಬಸ್‌ ಹಿಂಬಾಲಿಸಿ ಬಂದಿದ್ದಾನೆ. ವಡಾಖ್‌ ಬಳಿ ಬಸ್‌ನ್ನು ಓವರ್‌ ಟೇಕ್‌ ಮಾಡಿ ಅಡ್ಡ ಹಾಕುವಲ್ಲಿ ಯಶಸ್ವಿಯಾಗಿದ್ದಾನೆ.

ಬಸ್‌ ನಿಲ್ಲಿಸುತ್ತಿದ್ದಂತೆ ಕಾರಿನಿಂದ ಇಳಿದುಬಂದ ವ್ಯಕ್ತಿಯೊಬ್ಬ ಬಸ್‌ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಗನ್‌ ಹಿಡಿದು ಬಂದ ಮತ್ತೊಬ್ಬ, ಗುಂಡು ಹಾರಿಸಿ ಸಾಯಿಸುವುದಾಗಿ ಬೆದರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Share Post