International

ಮಿಂಚಿನ ವೇಗಕ್ಕೆ ವಿಜ್ಞಾನಿಗಳು ಶಾಕ್: ಟ್ವೀಟ್‌ ಮಾಡಿರುವ WMO

ಅಮೆರಿಕಾ: ಮುಂಗಾರು ಹಂಗಾಮಿನಲ್ಲಿ ತುಂತುರು ಹಾಗೂ ಭಾರೀ ಮಳೆಯಾಗುತ್ತದೆ. ಅವುಗಳ ಜೊತೆಗೆ ಆಲಿಕಲ್ಲು, ಗುಡುಗು, ಮಿಂಚು ಸಹ ಅಪ್ಪಳಿಸುತ್ತದೆ. ಆದರೆ ಮಿಂಚಿನ ಕತೆ ಬೇರೇನೆ ಇದೆ. ಆಲಿಕಲ್ಲು, ಗುಡುಗಿನ ಹಾಗಲ್ಲ ರಪ್‌ ಅಂತ ಕಣ್‌ ಮುಂದೆ ಬಂದಿರುತ್ತೆ, ಆದ್ರೆ ಕ್ಷಣ ಮಾತ್ರದಲ್ಲಿ ಮತ್ತೆ ಮಾಯ ಆಗುತ್ತೆ. ಅದರ ಎಫೆಕ್ಟ್‌ ಗೊತ್ತಾಗೊಧು ಯಾವುದಾದರೂ ಮರ ಹೊತ್ತಿಕೊಂಡಾಗ ಅಥವಾ ಮನುಷ್ಯ ಮಿಂಚಿನಿಂದ ಸತ್ತಾಗ ಮಾತ್ರ.

ಈವರೆಗೂ ಮಿಂಚಿನ ಬಗ್ಗೆ ಯಾವುದೇ ದಾಖಲೆಗಳು ನಡೆದಿಲ್ಲ ಆದ್ರೆ WMO ನೀಡಿರುವ ಮಾಹಿತಿ ವಿಶ್ವ ದಾಖಲೆ ಮಟ್ಟ ತಲುಪಿದೆ. ಅತಿ ದೊಡ್ಡ ಮಿಂಚನ್ನು ನೋಡಿ ಹಲವರು ಬೆಚ್ಚಿಬಿದ್ದಿದ್ದಾರೆ. ಮಿಂಚು ಎಷ್ಟು ದೊಡ್ಡದಾಗಿತ್ತು ಅಂದ್ರೆ ಅದು 770 ಕಿ.ಮೀ. ವ್ಯಾಪಿಸಿತ್ತು ಜೊತೆಗೆ 17.1 ಸೆಕೆಂಡುಗಳ ಕಾಲ ನಿಶ್ಚಲವಾಗಿತ್ತು ಎಂಬುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಇಂತಹ ದೊಡ್ಡ ಮಿಂಚನ್ನು ಕಂಡವರು ದಿಗ್ಭ್ರಮೆಗೊಂಡಿದ್ದಾರಂತೆ.  ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಇತ್ತೀಚೆಗೆ ಈ ಮಿಂಚು ವಿಶ್ವದಲ್ಲೇ ಅತಿ ದೊಡ್ಡದು ಅಂತ ಘೋಷಣೆ ಮಾಡಿದೆ.

2020 ಏಪ್ರಿಲ್‌ ದಕ್ಷಿಣ ಅಮೆರಕಾದ ಪ್ರಾಂತ್ಯದಲ್ಲಿ 770ಕಿಮೀ ವರೆಗೆ ಈ ಮಿಂಚು ವ್ಯಾಪಿಸಿದೆ. ಮಿಸಿಸಿಪ್ಪಿ, ಲೂಸಿಯಾನಾ, ಟೆಕ್ಸಾಸ್‌ವರೆಗೂ ಈದು ವಿಸ್ತರಿಸಿದ್ದಾಗಿ ತಿಳಿಸಿದೆ.  ಅಕ್ಟೋಬರ್ 2018 ರಲ್ಲಿ ದಕ್ಷಿಣ ಬ್ರೆಜಿಲ್‌ನಲ್ಲಿ ಹೊಡೆದ ಮಿಂಚಿಗಿಂತ  60 ಕಿಮೀ ಹೆಚ್ಚು ದೂರ ದಾಖಲು ಮಾಡಿದೆ ಎಂದು WMO ತಜ್ಞರ ಸಮಿತಿ ತಿಳಿಸಿದೆ.

ಪ್ರಕೃತಿಯಲ್ಲಿ ಗುಡುಗು ಮತ್ತು ಮಿಂಚು ಶಕ್ತಿಯ ದಕ್ಷತೆಯ ಆಧಾರದ ಮೇಲೆ ವೈಮಾನಿಕವನ್ನು ಅಳೆಯಲಾಗುತ್ತದೆ. ಮಿಂಚಿನ ಸ್ಥಿತಿಗತಿಯನ್ನು ನಿರ್ಧರಿಸುವ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸ್ಯಾಟಲೈಟ್ ಲೈಟಿಂಗ್ ಮತ್ತು ಇಮೇಜಿಂಗ್ ತಂತ್ರಜ್ಞಾನಗಳಿಂದ ಇದು ಕಾರ್ಯಸಾಧ್ಯ ಎಂದಿದ್ದಾರೆ.

Share Post