ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಗೆ ಭಾರತ ಸ್ನೇಹ ಹಸ್ತ: ವಿದೇಶಾಂಗ ಸಚಿವ ಲಂಕಾ ಪ್ರವಾಸ
ಶ್ರೀಲಂಕಾ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಭಾರತ ನೆರವಿನ ಹಸ್ತ ಚಾಚಿದೆ. ಭಾರತವು ಶ್ರೀಲಂಕಾ ಜನರ ಕಷ್ಟವನ್ನು ಅರ್ಥಮಾಡಿಕೊಂಡ ಭಾರತ ಶತಕೋಟಿ ಡಾಲರ್ ಸಾಲವನ್ನು ನೀಡಲು ಮುಂದಾಗಿದೆ.ಈ ವಿಚಾರವಾಗಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಮೂರು ದಿನಗಳ ಕಾಲ ಶ್ರೀಲಂಕಾಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಶ್ರೀಲಂಕಾವನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸುವ ಭರವಸೆಯನ್ನು ನೀಡಿದ್ದಾರೆ. ಶ್ರೀಲಂಕಾ ಈಗಾಗಲೇ ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಇದರಿಂದಾಗಿ ದೇಶದ ಶೇ 90ರಷ್ಟು ಹೋಟೆಲ್‌ಗಳು ಮುಚ್ಚಲಾಗಿದೆ.
ಬೆಲೆ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ರೀತಿಯ ಪರಿಸ್ಥಿತಿಯನ್ನು ಹತ್ತಿಕ್ಕಲು ಭಾರತ ಆಹಾರ, ಔಷಧ ಮತ್ತು ಇತರ ಅಗತ್ಯಗಳ ಆಮದುಗಳಿಗಾಗಿ ಶತಕೋಟಿ ಡಾಲರ್‌ಗಳನ್ನು ಸಾಲವಾಗಿ ನೀಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ಶ್ರೀಲಂಕಾವನ್ನು ಚೀನಾ ಸಂಪೂರ್ಣವಾಗಿ ಸಾಲದ ಸುಳಿಗೆ ತಳ್ಳಿದೆ. ಮೊದಲಿನಿಂದಲೂ ಭಾರತದ ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಇದನ್ನು ನಿರ್ಲಕ್ಷಿಸಿದ ಕಾರಣದಿಂದಾಗಿ ಇಂದು ಈ ಪರಿಸ್ಥಿತಯನ್ನು ಎದುರಿಸದೆ ಬೇರೆ ದಾರಿಯಿಲ್ಲದಂತಾಗಿದೆ. ಚೀನಾ ಜತೆಗಿನ ಶ್ರೀಲಂಕಾ ಮಾಡಿಕೊಂಡಿರುವ ಪ್ರಮುಖ ಒಪ್ಪಂದಗಳಿಂದ ತೊಂದರೆ ಆಗುವುದು ಖಚಿತ ಎಂಬ ಭಾರತ ನೀಡಿದ ಸೂಚನೆಗಳನ್ನು ಲಂಕಾ ತಳ್ಳಿಹಾಕಿದ್ದೇ ಇದಕ್ಕೆ ಈಗಿನ ಪರಿಸ್ಥಿತಿಗೆ ಕಾರಣ.
ಸಾವಯವ ಕೃಷಿಗೆ ಕ್ಷಾಮ.. ಕೋವಿಡ್ ಪ್ರಭಾವದಿಂದ ಪ್ರವಾಸೋದ್ಯಮಕ್ಕೆ ಉಂಟಾದ ಹಾನಿಯು ಶ್ರೀಲಂಕಾವನ್ನು ದಿವಾಳಿಯ ಅಂಚಿಗೆ ತಳ್ಳಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಶ್ರೀಲಂಕಾಕ್ಕೆ ಸ್ನೇಹಹಸ್ತ ಚಾಚಿದೆ. ಶ್ರೀಲಂಕಾ ಸಂಕಷ್ಟದಲ್ಲಿದ್ದಾಗ ಭಾರತ ನೆರವು ನೀಡುತ್ತಲೇ ಇರುತ್ತದೆ. ಶ್ರೀಲಂಕಾದಲ್ಲಿ ರಸಗೊಬ್ಬರದ ಕೊರತೆ ಉಂಟಾದಾಗ ಭಾರತೀಯ ವಾಯುಪಡೆ ವಿಮಾನಗಳಲ್ಲಿ ರಸಗೊಬ್ಬರವನ್ನು ಕಳುಹಿಸಿತು. ಕಳೆದ ತಿಂಗಳು ಪೆಟ್ರೋಲಿಯಂ ಉತ್ಪನ್ನಗಳ ಖರೀದಿಗಾಗಿ ಭಾರತವು ಶ್ರೀಲಂಕಾಕ್ಕೆ $ 50 ಶತಕೋಟಿ ನೆರವು ನೀಡಿದೆ. ಈಗ ಭಾರತ ಇನ್ನೂ ಒಂದು ಬಿಲಿಯನ್ ಡಾಲರ್ ಸಾಲ ನೀಡಿದೆ.