ಮುಂದಿನ 5ವರ್ಷಗಳಲ್ಲಿ 60ಲಕ್ಷ ಉದ್ಯೋಗ ಸೃಷ್ಟಿ ಗುರಿ-ವಿತ್ತ ಸಚಿವೆ
ದೆಹಲಿ: 2022-23 ನೇ ಸಾಲಿನ ಪೇಪರ್ಲೆಸ್ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್. ಸತತ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ನಾವು ಅಜಾದಿ-ಕಾ ಅಮೃತ ಮಹೋತ್ಸವ ಅಚರಿಸುತ್ತಿಸದ್ದೇವೆ. 2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯ ಗುರಿ, ಮಧ್ಯಮ ವರ್ಗದ ಅಭಿವೃದ್ದಿ ನಮ್ಮ ಧ್ಯೇಯ ಎಂದಿದ್ದಾರೆ. ಮುಂದಿನ 25ವರ್ಷಗಳಿಗೆ ಸಂಬಂಧಿಸಿದಂತೆ ಸರ್ಕಾರದ ಬ್ಲೂಪ್ರಿಂಟ್ ತಯಾರು ಮಾಡಲಾಗಿದ್ದು, ಡಿಜಿಟಲ್ ಆರ್ಥಿಕತೆ ಕಡೆ ಕೇಂದ್ರ ಸರ್ಕಾರ ಸಂಪೂರ್ಣ ಗಮನ ಹರಿಸಿದೆ. 2022ರಲ್ಲಿ ದೇಶದ ಆರ್ಥಿಕತೆ 9.2ರಷ್ಟು ಬೆಳವಣಿಗೆಯಾಗಿದೆ ಎಂಬುದು ಬಜೆಟ್ನಲ್ಲಿ ಉಲ್ಲೇಖಸಿದೆ.
ವಸತಿ ಬಡವರ ಕಲ್ಯಾಣಕ್ಕೆ ಸದ್ಯದಲ್ಲಿ ಎಲ್ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುತ್ತದೆ. ಏರ್ ಇಂಡಿಯಾ ಮೇಲಿನ ಬಂಡವಾಳ ಹಿಂತೆಯಗಲಾಗುತ್ತದೆ ಎಂದು ತಿಳಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 60ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಆತ್ಮ ನಿರ್ಭರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆಂತರಿಕವಾಗಿ ಮತ್ತು ಸ್ಥಳೀಯವಾಗಿ ಮೂವತ್ತು ಲಕ್ಷ ಉದ್ಯೋಗ ಸೃಷ್ಟಿ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಯುವಕರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ದೇಶದಲ್ಲಿ ಮಹಿಳೆಯರು, ಯುವಕರು, ಬಡವರ ಸಬಲೀಕರಣಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.
ನಾಲ್ಕು ರೂಪದಲ್ಲಿ ದೇಶದ ಅಭಿವೃದ್ದಿ ಹಂತಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
೧. ಪಿಎಂ ಗತಿ ಶಕ್ತಿ ಯೋಜನೆಗೆ 7ಇಂಜಿನ್ಗಳು
೨. ಎಲ್ಲರನ್ನು ಒಳಗೊಂಡ ಸಮಗ್ರ ಅಭಿವೃದ್ದಿ ಯೋಜನೆ
೩. ಉತ್ಪಾದನೆ ಹೆಚ್ಚಳ ವಲಯಕ್ಕೆ ಉತ್ತೇಜನ
೪. ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶವನ್ನು ಸಮಗ್ರ ಅಭಿವೃದ್ಧಯತ್ತ ಕೊಡೊಯ್ಯುವ ನಿಟ್ಟಿನಲ್ಲಿ ಈ ಬಜೆಟ್ ಅನ್ನು ರೂಪಿಸಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.