2022-23ನೇ ಸಾಲಿನ ಕೇಂದ್ರ ಬಜೆಟ್; ಸಂಸತ್ತಿಗೆ ಬಂದ ಬಜೆಟ್ ಪ್ರತಿಗಳು
ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮುಂಜಾನೆಯೇ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಜೆಟ್ ಮಂಡನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಅನುಮತಿ ಪಡೆದರು. ಅನಂತರ ಸಂಸತ್ ಭವನಕ್ಕೆ ಬಜೆಟ್ ಪ್ರತಿಯೊಂದಿಗೆ ಆಗಮಿಸಿದರು. ಸಂಸತ್ ಭವನದ ಮುಂದೆ ಸಂಪ್ರತದಾಯದಂತೆ ಬಜೆಟ್ ಪ್ರತಿ ಇರುವ ಕೆಂಪು ಚೀಲವನ್ನು ಪ್ರದರ್ಶಿಸಿದರು.
ಈಗ ಕೇಂದ್ರ ಸಂಪುಟ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಅನುಮತಿ ಕೋರಲಿದ್ದಾರೆ. ಮOದಿ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ಸಮುನತಿ ಸಿಕ್ಕ ನಂತರ, ಸದನದಲ್ಲಿ ಬಜೆಟ್ ಮಂಡಿಸಲಾಗುತ್ತದೆ. ಇನ್ನು ಇದಕ್ಕೂ ಮುನ್ನ ಸಂಸತ್ತಿನ ಸಿಬ್ಬಂದಿ ಬಜೆಟ್‌ನ ಪ್ರತಿಗಳನ್ನು ಸಂಸತ್ತಿಗೆ ತಂದಿದ್ದಾರೆ. ಶ್ವಾದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಅವುಗಳನ್ನು ಪರಿಶೀಲನೆ ಮಾಡಿದ ನಂತರ ಸಂಸತ್ತಿನೊಳಗೆ ಬಜೆಟ್ ಪ್ರತಿಗಳನ್ನು ತೆಗೆದುಕೊಂಡು ಹೋಗಲಾಯಿತು.