Cinema

ಪುನೀತ್‌ ಅವರ ಜೇಮ್ಸ್‌ಗೆ ದಾರಿ ಬಿಟ್ಟುಕೊಟ್ಟ RRR

ಹೈದರಾಬಾದ್‌ : ಪುನೀತ್‌ ಅವರ ಜೇಮ್ಸ್‌ ಚಿತ್ರದ ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಈಗ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬ್ಯುಸಿ ಆಗಿದೆ. ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ ಅಪ್ಪು ಅವರ ಜೇಮ್ಸ್‌ ಮಾರ್ಚ್‌ 17ಕ್ಕೆ ಬರೋದು ನಿಶ್ಚಿತ ಎನ್ನುತ್ತಿದ್ದಾರೆ ಸಿನಿ ಪಂಡಿತರು. ಇನ್ನು ಈ ಸಿನಿಮಾಗೆ ಅಡ್ಡಲಾಗಿ ರಾಜಮೌಳಿ ಅವರ RRR ಸಿನಿಮಾ ಎದುರಾಗುವ ಸಾಧ್ಯತೆ ಇತ್ತು. ಈಗ ಅದು ದೂರವಾಗಿದೆ.

RRR ಚಿತ್ರತಂಡ ತಮ್ಮ ಹೊಸ ರಿಲೀಸ್‌ ಡೇಟ್‌ ಅನ್ನು ಘೋಷಣೆ ಮಾಡಿದೆ. ಮಾರ್ಚ್‌ 25ಕ್ಕೆ RRR ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಅಪ್ಪು ಅವರ ಜೇಮ್ಸ್‌ ಸಿನಿಮಾದೊಂದಿಗಿನ ಕ್ಲ್ಯಾಶ್‌ ತಪ್ಪಿಸಲು ರಾಜಮೌಳಿಯವರು ಈ ನಿರ್ಧಾರ ಕೈಗೊಂಡಿದ್ದಾರೆ.

ಪುನೀತ್‌ ಅವರ ಕೊನೆ ಚಿತ್ರ ಅನ್ನುವ ಕಾರಣಕ್ಕೆ ಹೈಪ್‌ ಮತ್ತಷ್ಟು ಹೆಚ್ಚಾಗಿದೆ. ಸೈನಿಕನ ಪಾತ್ರದಲ್ಲಿ ಮೊದಲ ಬಾರಿ ಪುನೀತ್‌ ಅವರು  ಕಾಣಿಸಿಕೊಳ್ಳುತ್ತಿರುವುದು ಕೂಡ ಮತ್ತೊಂದು ವಿಶೇಷವಾಗಿದೆ. ಚೇತನ್‌ ಕುಮಾರ್‌ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.

 

Share Post