Cinema

ಶ್ರೀನಿ ಅಭಿನಯದ ಓಲ್ಡ್‌ ಮಾಂಕ್‌ ಫೆ-25ಕ್ಕೆ

ಬೆಂಗಳೂರು : ಶ್ರೀನಿ ಅಭಿನಯದ ಓಲ್ಡ್‌ ಮಾಂಕ್‌ ಸಿನಿಮಾ ಇದೇ ಫೆಬ್ರುವರಿ 25ಕ್ಕೆ ತೆರೆ ಕಾಣಲಿದೆ. ವಿಕ್ರಾಂತ್‌ ರೋಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋದರೆ ನಾವು ಫೆಬ್ರುವರಿ 25ಕ್ಕೆ ಬರ್ತೀವಿ ಎಂದು ಶ್ರೀನಿ ಹೇಳಿಕೊಂಡಿದ್ದರು. ಈಗ ಅದರಂತೆಯೇ ತಮ್ಮ ಸಿನಿಮಾದ ರಿಲೀಸ್‌ ಡೇಟ್‌ ಅನ್ನು ಅನೌನ್ಸ್‌ ಮಾಡಿದ್ದಾರೆ.

ಶ್ರೀನಿ ಮತ್ತು ಅದಿತಿ ಪ್ರಭುದೇವಾ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಓಲ್ಡ್‌ ಮಾಂಕ್‌ ಸಿನಿಮಾದಲ್ಲಿ ಹಿರಿಯ ನಟರಾದ ರಾಜೇಶ್‌, ಡಿಂಗ್ರಿ ನಾಗರಾಜ್‌ , ಎಸ್.‌ ನಾರಾಯಣ್‌, ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್‌, ಸುನೀಲ್‌ ರಾವ್‌, ಸುಜಯ್‌ ಶಾಸ್ತ್ರಿ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಸಿನಿಮಾದ ನಿರ್ದೇಶನ ಕೂಡ ಶ್ರೀನಿ ಅವರೇ ಮಾಡಿದ್ದಾರೆ. ಪ್ರದೀಪ್‌ ಶರ್ಮ ಬಂಡವಾಳ ಹೂಡಿರುವ ಈ ಸಿನಿಮಾದ ಛಾಯಾಗ್ರಾಹಕ ಭರತ್‌ ಪರಶುರಾಮ್‌, ಸಂಕಲನದ ಜವಾಬ್ದಾರಿ ಹೊತ್ತಿರುವವರು ದೀಪು ಎಸ್‌ ಕುಮಾರ್.‌ ಸಿನಿಮಾ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ.

Share Post