National

ಕೇಂದ್ರ ಆರ್ಥಿಕ ಸಮೀಕ್ಷೆ ಮಂಡನೆ; ಶೇ.8.5 ಆರ್ಥಿಕ ಬೆಳವಣಿಗೆ ಅಂದಾಜು

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ದೇಶ ಶೇಕಡಾ 8 ರಿಂದ 8.5ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುವ ಸಾಧ್ಯತೆ ಎಂದು ಕೇಂದ್ರ ಆರ್ಥಿಕ ಸಮೀಕೆ ಹೇಳಿದೆ. ನಾಳೆ ಕೇಂದ್ರ ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಇಂದು ಸಂಸತ್ತಿನಲ್ಲಿ ಆರ್ಥಿಕ ಬಜೆಟ್‌ ಮಂಡನೆ ಮಾಡಲಾಯಿತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ ಶೇಕಡಾ 9.2 ರಷ್ಟು ಆರ್ಥಿಕ ಬೆಳವಣಿಗೆಯಾಗುತ್ತದೆ ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆಯಂತೆ ಬೆಳವಣಿಗೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಆರ್ಥಿಕ ಬೆಳವಣಿಗೆ ಪ್ರಮಾಣ ಇದಕ್ಕಿಂತ ಕಡಿಮೆಯಾಗಿರಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಗಳಲ್ಲಿನ ಬೆಳವಣಿಗೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ದೇಶ ಆರ್ಥಿಕ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತಿದ್ದಂತೆ ಮುಂಬೈ ಷೇರುಪೇಟೆಯಲ್ಲಿ ಚೇತರಿಕೆ ಕಂಡಿದೆ. ಆರ್ಥಿಕ ಸಮೀಕ್ಷೆ ಮುಂಬೈ ಷೇರುಪೇಟೆಯನ್ನು ಚೈತನ್ಯಗೊಳಿಸಿದೆ.

Share Post