News

47KG ಹೆರಾಯಿನ್‌ ಹಾಗೂ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಯೋಧರು; ಒಬ್ಬ ಯೋಧನಿಗೆ ತೀವ್ರ ಗಾಯ

ಗುರುದಾಸ್‌ಪುರ್‌: ಪಂಜಾಬ್‌ನ ಗುರುದಾಸ್‌ಪುರ್‌ ಬಳಿ ಬಿಎಸ್‌ಎಫ್‌ ಯೋಧರು ಭಾರಿ ಪ್ರಮಾಣದ ಹೆರಾಯಿನ್‌ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ  ಚಂದುವಾಲಾ ಪೋಸ್ಟ್‌ ಬಳಿ ಈ ಕಾರ್ಯಾಚರಣೆ ನಡೆದಿದೆ.

ಕಾರ್ಯಾಚರಣೆ ವೇಳೆ ಒಟ್ಟು 47 ಕೆಜಿ ಹೆರಾಯಿನ್‌ ಹಾಗೂ ಬಂದೂಕುಗಳನ್ನು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು, ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ಇವುಗಳನ್ನು ಬಿಎಸ್‌ಎಫ್‌ ಯೋಧರು ವಶಪಡಿಸಿಕೊಂಡಿದ್ದಾರೆ. ಇನ್ನು ದಾಳಿ ವೇಳೆ ಹೆರಾಯಿನ್‌ ಸಾಗಿಸುತ್ತಿದ್ದ ದುಷ್ಕರ್ಮಿಗಳು ಬಿಎಸ್‌ಎಫ್‌ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಿಎಸ್‌ಎಫ್‌ ಸಿಬ್ಬಂದಿಯೊಬ್ಬರಿಗೆ ತೀವ್ರವಾದ ಗಾಯಗಳಾಗಿವೆ. ಮುಖ ಹಾಗೂ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

 

 

Share Post