ಐಶ್ವರ್ಯ ಮತ್ತು ಧನುಷ್ ದಾಂಪತ್ಯ ಸರಿಪಡಿಸಲು ರಜನಿಕಾಂತ್ ಸರ್ಕಸ್
ಚೆನೈ : ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಧನುಷ್ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನ ಅಂತ್ಯಗೊಳಿಸಿರುವುದಾಗಿ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದರು. 18ವರ್ಷಗಳ ದಾಂಪತ್ಯವನ್ನು ಐಶ್ವರ್ಯ ಮತ್ತ ಧನುಷ್ ಅವರು ಅಂತ್ಯಗೊಳಿಸಿದ್ದನ್ನು ಕಂಡು ಅಭಿಮಾನಿಗಳೆಲ್ಲರೂ ಶಾಕ್ ಆಗಿದ್ದರು.
ರಜನಿಕಾಂತ್ ಅವರಿಗೆ ವಿಚ್ಛೇದನದ ವಿಷಯ ಸಾಕಷ್ಟು ಬೇಸರವನ್ನು ತಂದಿದೆ. ಈಗ ರಜನಿಕಾಂತ್ ಇವರ ದಾಂಪತ್ಯ ಜೀವನವನ್ನು ಸರಿಪಡಿಸಲು ಮುಂದಾಗಿದ್ದಾರೆ. ಮಗಳು ಮತ್ತು ಅಳಿಯನ ನಡುವಿನ ಮನಸ್ತಾಪ ದೂರ ಮಾಡಿ ಅವರನ್ನು ಒಂದು ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದು ಸಕ್ಸಸ್ ಆಗುತ್ತಾ ಎಂದು ಕಾದು ನೋಡಬೇಕಿದೆ.