Crime

ಕಂಠೀರವ ಸ್ಟುಡಿಯೋ ಬಳಿ ಭೀಕರ ಅಪಘಾತ : ಇಬ್ಬರು ಸಾವು

ಬೆಂಗಳೂರು : ಕಂಠೀರವ ಸ್ಟುಡಿಯೋ ಬಳಿ ಭೀಕರ ಅಪಘಾತಕ್ಕೆ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಲಗ್ಗೆರೆ ಕಡೆಯಿಂದ ಗೊರಗುಂಟೆ ಪಾಳ್ಯದ ಕಡೆಗೆ ತಡರಾತ್ರಿ ಹೋಗುತ್ತಿದ್ದ ಇಬ್ಬರು ಹಿಂದಿನಿಂದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಅಸ್ಸಾಂ ಮೂಲದ ಕುಮಾರ್‌ ಲಿಂಬೂ ಮತ್ತು ಸುನಿಲ್‌ ಸ್ಕೂಟರ್‌ನಲ್ಲಿ ತೆರಳುತ್ತಿದ್ದವರು ಎಂದು ಗುರುತಿಸಲಾಗಿದೆ. ಕುಮಾರ್‌ ಲಿಂಬೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಇನ್ನು ಸುನಿಲ್‌ ಅವರಿಗೆ ಸಾಕಷ್ಟು ಗಾಯಗಳಾಗಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಸುನಿಲ್‌ ಕೂಡ ಮೃತರಾಗಿದ್ದಾರೆ.

ನಿಧಾನವಾಗಿ ಚಲಿಸುತ್ತಿದ್ದ ಕ್ಯಾಂಟರ್‌ ಗಾಡಿಗೆ ಹಿಂದಿನಿಂದ ವೇಗವಾಗಿ ಬಾಡಿಗೆ ಸ್ಕೂಟರ್‌ನಲ್ಲಿ ಬಂದ ಕುಮಾರ್‌ ಲಿಂಬೂ ಮತ್ತು ಸುನೀಲ್‌ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಅಪಘಾತ ಸಂಭವಿಸಿದೆ ಎಂದು ರಾಜಾಜಿನಗರದ ಪೊಲೀಸರು ವರದಿ ನೀಡಿದ್ದಾರೆ. ಕ್ಯಾಂಟರ್‌ ಚಾಲಕನಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

Share Post