Health

ಮಕ್ಕಳಿಗೆ ಮಾಸ್ಕ್‌ ಕಡ್ಡಾಯವಲ್ಲ : ಕೇಂದ್ರ ಸರ್ಕಾರ

ನವದೆಹಲಿ : ಮೂರನೇ ಅಲೆ ಎಲ್ಲೆಡೆ ವ್ಯಾಪಿಸುತ್ತಿದೆ, ಆದರೆ ಕೊರೊನಾದಿಂದ ಮಕ್ಕಳಿಗೆ ಅಷ್ಟೇನು ತೊಂದರೆ ಆಗಿಲ್ಲ. ಇದರಿಂದ ಕೇಂದ್ರ ಸರ್ಕಾರ ಮಹ್ತವದ ಘೋಷಣೆ ಮಾಡಿದೆ. ಕೊರೊನಾ ತೀವ್ರತೆ ಎಷ್ಟೇ ಇದ್ದರು ಮಕ್ಕಳಿಗೆ 18ವರ್ಷದೊಳಗಿನ ಮಕ್ಕಳಿಗೆ, ಪ್ರತಿಕಾಯ ಸೃಷ್ಠಿಗೆ ಪೂರಕವಾದ ಆಂಟಿಬಾಡಿ ಔಷಧಗಳನ್ನು ಬಳಸಬಾರದು ಎಂದು ಕೇಂದ್ರ ಸೂಚಿಸಿದೆ.

ಐದಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳಿಗೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯಪಡಿಸಿಲ್ಲ. 6-11 ವರ್ಷದ ಮಕ್ಕಳು ಮಾಸ್ಕ್ ಬಳಸುವ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ, ಪೋಷಕರ ಮೇಲ್ವಿಚಾರಣೆಯಲ್ಲಿ ಬಳಸಬಹುದು. 12 ವರ್ಷ ಮೀರಿದವರು ಕಡ್ಡಾಯವಾಗಿ ವಯಸ್ಕರು ಧರಿಸುವಂತೆಯೇ ಮಾಸ್ಕ್ ಧರಿಸಬೇಕು ಎಂದು ಹೇಳಿದೆ

ಮಕ್ಕಳು ಮತ್ತು ಅಪ್ರಾಪ್ತರಿಗೆ ಸಂಬಂಧಿಸಿದಂತೆ ಕೋವಿಡ್‌ ನಿರ್ವಹಣೆ ಕುರಿತು ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಒಂದು ವೇಳೆ ಸ್ಟಿರಾಯ್ಡ್‌ ಬಳಸುವುದಾದರೂ ಅದನ್ನು ಕೇವಲ 10 ರಿಂದ 14ದಿನಕ್ಕೆ ಮಾತ್ರ ಅದು ಸೀಮಿತವಾಗಿರಬೇಕು ಎಂದು ಸೂಚಿಸಿದೆ.

 

Share Post