Sports

IPL 2022 : ಹೊಸ ತಂಡಗಳು ಆಯ್ದುಕೊಂಡಿರುವ ಆಟಗಾರರು ಇವರೇ

ಮುಂಬೈ : ಕೋವಿಡ್‌ ಪರಿಸ್ಥಿತಿ ಉಲ್ಬಣಗೊಂಡಿರಲಿಲ್ಲವೆಂದರೆ ಫೆಬ್ರುವರಿ ಮೊದಲ ವಾರದಲ್ಲಿ ಮೆಗಾ ಆಕ್ಷನ್‌ ನಡೆಯಬೇಕಿತ್ತು. ಈಗ ಈ ಮೆಗಾ ಆಕ್ಷನ್‌ ಮುಂದೆ ಹೋಗುವ ಸಾಧ್ಯತೆ ಇದೆ. ಕೊರೊನಾ ಸಂದರ್ಭದಲ್ಲಿ ಪಂದ್ಯಗಳ ಆಯೋಜನೆ ಕೂಡ ತಲೆನೋವಾಗಿ ಪರಿಣಮಿಸಿದೆ.

ಇನ್ನು ಇದೆಲ್ಲದರ ನಡುವೆ ಎರಡು ಹೊಸ ಫ್ರಾಂಚೈಸಿಗಳು ಐಪಿಎಲ್‌ಗೆ ಸೇರಿರುವುದು ಐಪಿಎಲ್‌ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಈ ಬಾರಿ ಮೆಗಾ ಆಕ್ಷನ್‌ ನಡೆಯುತ್ತಿರುವ ಕಾರಣ ಮೂರು ಆಟಗಾರರನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಆಟಗಾರರನ್ನು ತಂಡದಿಂದ ರಿಲೀಸ್‌ ಮಾಡಲು ಬಿಸಿಸಿಐ ಸೂಚಿಸಿತ್ತು.

ಅದರಂತೆಯೇ ಲಕ್ನೌ ಮತ್ತು ಅಹಮದಾಬಾದ್‌ ತಂಡಗಳಿಗೆ ತಲಾ ಮೂರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿತ್ತು. ಅದರಂತೆಯೇ ಲಕ್ನೌ ಮತ್ತು ಅಹಮದಾಬಾದ್‌ ತಂಡಗಳು ತಮ್ಮ ಆಟಗಾರರನ್ನು ಆರಿಸಿಕೊಂಡಿದ್ದಾರೆ.

ಲಕ್ನೌ ಸೇರಿದ ಆಟಗಾರರು : ಕೆ.ಎಲ್‌ ರಾಹುಲ್‌, ರವಿ ಬಿಷ್ಣೋಯ್‌ ಮತ್ತು ಮಾರ್ಕಸ್‌ ಸ್ಟಾಯಿನಿಸ್‌

ಅಹಮದಾಬಾದ್‌ ಸೇರಿದ ಆಟಗಾಗಗು : ಹಾರ್ದಿಕ್‌ ಪಾಂಡ್ರಾ, ರಶೀದ್‌ ಖಾನ್‌, ಶುಭ್ಮನ್‌ ಗಿಲ್‌

ಲಕ್ನೌ ತಂಡಕ್ಕೆ ಕೆ ಡಲ್‌ ರಾಹುಲ್‌ ನಾಯಕನಾದರೆ, ಅಹಮದಾಬಾದ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕರಾಗಿದ್ದಾರೆ.

ಇವರ ಹೆಸರುಗಳು ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.

Share Post