Bengaluru

ಕಾಲೇಜುಗಳಲ್ಲಿ ಕನ್ನಡ ಕಲಿಯುವಿಕೆಗೆ ಒತ್ತಡ ಬೇಡ: ಹೈಕೋರ್ಟ್

ಬೆಂಗಳೂರು: ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಎಂಬ ಸರ್ಕಾರದ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ  ನಡೆಸಲಾಯಿತು. ಕನ್ನಡ ಕಲಿಕೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದ ಪಿಐಎಲ್‌ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ಬಲವಂತವಾಗಿ ಕಲಿಯಿರಿ ಎನ್ನುವುದು ಬೇಡ. ಈ ಮೊದಲೇ ನೀಡಿದ ಹೈಕೋರ್ಟ್‌ ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡಿಲ್ಲ ಜೊತೆಗೆ ವಿಶ್ವವಿದ್ಯಾಲಯಗಳಿಗೆ ನ್ಯಾಯಾಲಯ ನೀಡಿದ ಆದೇಶದ ಮಾಹಿತಿಯನ್ನು ಕೂಡ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು .

ಸರ್ಕಾರದ ಈ ನೀತಿಯನ್ನು ವಿರೋಧಿಸಿ  ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್  ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿತು. ಅರ್ಜಿದಾರರ ಮನವಿಗೆ ಪ್ರತಿಕ್ರಿಯಿಸಿರುವ ಸಿಜೆ ಪಿಐಎಲ್‌ ಕುರಿತಾದಂತೆ ಎಲ್ಲರ ವಾದವನ್ನು ಆಲಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಹೇಳಿದ್ರು. ಈ ಅರ್ಜಿ ವಿಚಾರಣೆಯನ್ನು ಜನವರಿ 31ಕ್ಕೆ ಮುಂದೂಡಲಾಯಿತು.

ಈ ಹಿಂದಿನ ಆದೇಶದಲ್ಲೂ ಕೂಡ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮಕ್ಕಳ ಓದಿನ ವಿಚಾರದಲ್ಲಿ ಇಂತಹ ಆದೇಶಗಳನ್ನು ನೀಡುವುದು ಬೇಡ. ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಮರುಪರಿಶೀಲಿಸುವಂತೆ ಸೂಚನೆ ಕೂಡ ನೀಡಿತ್ತು. ಆದ್ರೆ ನ್ಯಾಯಾಲಯ ತೀರ್ಮಾನವನ್ನು ಒಪ್ಪದ ಸರ್ಕಾರ ತಾನು ತೆಗೆದುಕೊಂಡಿರುವ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಶಾಸ್ತ್ರೀಯವಾಗಿರುವ ಕನ್ನಡವನ್ನು ಕಲಿಯುವಂತೆ ನಾವು ವಿದ್ಯಾರ್ಥಿಗಳಿಗೆ ಹೇಳುತ್ತಿಲ್ಲ ಎಂದು ವಾದ ಮಾಡಿತ್ತು. ಸರ್ಕಾರದ ಈ ವಾದವನ್ನು ಒಪ್ಪದ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿ ಮರುಪರಿಶೀಲನೆಗೆ ಅವಕಾಶ ನೀಡಿದೆ.

Share Post