ಸ್ಟೇಷನ್ ಮಾಸ್ಟರ್ ಮೊಬೈಲ್ನಲ್ಲಿ ಮಗ್ನ; ಆಟೋಗೆ ಗುದ್ದಿದ ರೈಲು!
ಮೈಸೂರು; ಮೊಬೈಲ್ ತಂದ ಅವಾಂತರಗಳು ಅಷ್ಟಿಷ್ಟಲ್ಲ.. ಮೊಬೈಲ್ನಷ್ಟು ಮನುಷ್ಯರನ್ನು ಹಿಪ್ನಟೈಸ್ ಮಾಡಿದ ವಸ್ತು ಮತ್ತೊಂದಿಲ್ಲ ಅನಿಸುತ್ತೆ… ಸಾವು ಹತ್ತಿರಕ್ಕೆ ಬರುತ್ತಿದ್ದರೂ ಮನುಷ್ಯರು ಮೊಬೈಲ್ನಲ್ಲಿ ಮುಳುಗಿರುತ್ತಾರೆ.. ಆ ಮಟ್ಟಿಗೆ ಮನುಷ್ಯ ಮೊಬೈಲ್ ದಾಸನಾಗಿದ್ದಾನೆ.. ಅದೇ ರೀತಿ ರೈಲ್ವೆ ಸ್ಟೇಷನ್ ಮಾಸ್ಟರ್ ಮೊಬೈಲ್ನಲ್ಲಿ ಮುಳುಗಿಹೋಗಿ ತನ್ನ ಕೆಲಸ ಮರೆತುಬಿಟ್ಟರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಈ ಸುದ್ದಿ ಉದಾಹರಣೆ..
ಮೈಸೂರಿನ ಇಲವಾಲ ಹೋಬಳಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್ ನಲ್ಲಿ ಸ್ಟೇಷನ್ ಮಾಸ್ಟರ್ ಮೊಬೈಲ್ ನೋಡಿಕೊಂಡು ಕುಳಿತಿದ್ದಾನೆ.. ಹೀಗಾಗಿ ರೈಲು ಬರುತ್ತಿದ್ದರಿಂದ ಗೇಟ್ ಹಾಕುವುದನ್ನು ಮರೆತಿದ್ದಾನೆ.. ಇದರಿಂದಾಗಿ ರೈಲು ಬರುವ ವೇಳೆ ಹಳಿ ದಾಟಲು ಆಟೋ ಬಂದಿದೆ.. ಈ ವೇಳೆ ರೈಲು ಗುದ್ದಿ ಆಟೋದಲ್ಲಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ..
ಮೈಸೂರು-ಅರಸೀಕೆರೆ ವಿಶೇಷ ರೈಲು ಅರಸೀಕೆರೆಗೆ ಹೋಗುತ್ತಿತ್ತು.. ಮಲ್ಲೇಗೌಡನ ಕೊಪ್ಪಲು ಬಳಿ ಗೇಟ್ ಹಾಕಬೇಕಿತ್ತು.. ಆದ್ರೆ ಮೊಬೈಲ್ನಲ್ಲಿ ಮೈಮರೆತಿದ್ದ ಸ್ಟೇಷನ್ ಮಾಸ್ಟರ್ ರೈಲು ಬರುವುದನ್ನೇ ಮರೆತಿದ್ದಾನೆ.. ಹೀಗಾಗಿ ರೈಲು ಬರುವುದನ್ನು ಅರಿಯದ ವ್ಯಕ್ತಿ ಗೂಡ್ಸ್ ಆಟೋವನ್ನು ರೈಲು ಹಳಿ ದಾಟಿಸಲು ಹೋಗಿದ್ದಾನೆ.. ಈ ವೇಳೆ ಡಿಕ್ಕಿಯಾಗಿದೆ.. ಇದರಿಂದಾಗಿ ಆಟೋ ಓಡಿಸುತ್ತಿದ್ದಾತ ಹಾಗೂ ಆತನ 9 ಹಾಗೂ 5 ವರ್ಷದ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ..
ಆಟೋ ಜಖಂಗೊಂಡಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಸ್ಟೇಷನ್ ಮಾಸ್ಟರ್ ಅವಾಂತರದಿಂದ ಇಷ್ಟೆಲ್ಲಾ ಆಗಿದೆ..