CinemaUncategorized

ಎಲ್ಲೆಲ್ಲೂ ಪುಷ್ಟ ಸಿನಿಮಾದ ಸಾಮಿ..ಸಾಮಿ ಹಾಡಿನದ್ದೇ ಹವಾ: ದೇವಸ್ಥಾನದಲ್ಲೂ ಕೂಡ..

ಕೇರಳ: ಕೊರೊನಾ ಕರಿನೆರಳಿನ ನಡುವೆಯೂ 300ಕೋಟಿ ಕಲೆಕ್ಷನ್‌ ಮಾಡಿ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಪುಷ್ಪ ಸಿನಿಮಾದ ಹಾಡುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಚಿಕ್ಕ ಹುಡುಗನಿಂದ ಹಿಡಿದು ಹಿರಿಯವರೆಗೆ ಯಾವ ಮ್ಯೂಸಿಕ್‌ ಚಾನಲ್‌ ಹಾಕಿದ್ರೂ ಪುಷ್ಪ ಸಿನಿಮಾಗಳ ಹಾಡುಗಳದ್ದೇ ಕಾರುಬಾರು. ಈ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಅದೃಷ್ಟವೇ ಖುಲಾಯಿಸಿದಂತಿದೆ. ಶ್ರೀವಲ್ಲಿ ಪಾತ್ರ ರಶ್ಮಿಕಾಗೆ ಮತ್ತಷ್ಟು ಬೇಡಿಕೆ ಹೆಚ್ಚಿಸಿದೆ. ಅಲ್ಲು ಅರ್ಜುನ್‌, ರಶ್ಮಕಾ ನೃತ್ಯದ ಸಾಮಿ…ಸಾಮಿ…ಹಾಡು ಜನರ ಬಾಯಲ್ಲಿ ಅಷ್ಟೆ ಅಲ್ಲದೆ ದೇವಾಲಯಗಳಲ್ಲೂ ಟ್ಯೂನ್‌ ಆಗಿ ಪರಿವರ್ತನೆ ಆಗಿದೆ.

ಸಾಮಾನ್ಯವಾಗಿ ದೇವಾಲಯಗಳ ಪೂಜೆ ಸಂದರ್ಭಗಳಲ್ಲಿ ಭಕ್ತಿ ಪೂರ್ವಕ ಹಾಡುಗಳನ್ನು ಟ್ಯೂನ್‌ ಮಾಡಿ ವಾದ್ಯದವರು ಬಾರಿಸುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ ಕೂಡ. ಈಗ ಭಕ್ತಿಗೀತೆಗಳ ಸಾಲಿಗೆ ಸಾಮಿ..ಸಾಮಿ ಹಾಡು ಕೂಡ ಸೇರ್ಪಡೆಯಾಗಿದೆ. ಕೇರಳದ ದೇವಾಲಯವೊಂದರಲ್ಲಿ ವಾದ್ಯ ನುಡಿಸುವವರು ಸಾಮಿ..ಸಾಮಿ..ಹಾಡಿನ ಟ್ಯೂನ್‌ ಬಾರಿಸುತ್ತಿರುವ ವಿಡಿಯೋ ವೈರಲ್‌ ಸಖತ್‌ ವೈರಲ್‌ ಆಗಿದೆ.

ಇದಕ್ಕೂ ಮೊದಲು ಊ ಅಂಟಾವಾ..ಮಾವ.. ಹಾಡು ಪೊರುಷ ವಿರೋಧಿ ಎಂದು ಬಹಳಷ್ಟು ಟೀಕೆ ಟಿಪ್ಪಣಿಗಳಿಗೆ ಕಾರಣವಾಗಿತ್ತು. ಆಗ ಒಬ್ಬ ಸಂಗೀತಗಾರನಿಗೆ ಎಲ್ಲ ಹಾಡುಗಳು ದೈವ ಭಕ್ತಿಯಿಂದಲೇ ಕೂಡಿರುತ್ತವೆ ಎಂದು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಹೇಳಿಕೆ ಕೂಡ ಕೊಟ್ಟಿದ್ರು. ಅದರ ಬೆನ್ನಲ್ಲೇ ದೇವಸ್ಥಾನಲ್ಲಿ ಈ ಟ್ಯೂನ್‌ ಬಳಸಿರುವುದು ಆಶ್ಚರ್ಯಕರವಾಗಿದ್ದರೂ, ಅಭಿಮಾನಿಗಳಿಗೆ ಆನಂದವನ್ನುಂಟುಮಾಡಿದೆ.

Share Post