CrimeDistrictsUncategorized

ಬಾಗೇಪಲ್ಲಿ ಬಳಿ ಭಾರಿ ಪ್ರಮಾಣದ ಚಿನ್ನ ವಶ; 5.5 ಕೆಜಿ ಚಿನ್ನ ಜಪ್ತಿ

 

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಚೆಕ್‌ಪೋಸ್ಟ್‌ ಬಳಿ ಭಾರಿ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 5.585 ಕೆಜಿ ತೂಕದ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಇದರ ಮೌಲ್ಯ 2.66 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕಾರಿನಲ್ಲಿದ್ದವರು ಹೇಳೋ ಪ್ರಕಾರ, ಕರ್ನೂಲಿನ ಚಿನ್ನದ ಅಂಗಡಿಯೊಂದರಿಂದ ವಿಜಯವಾಡದ ಅಂಗಡಿಯೊಂದನ್ನು ತೆಗೆದುಕೊಂಡು ಹೋಗಲಾಗುತ್ತಿತ್ತಂತೆ. ಆದ್ರೆ, ಆ ಕಾರು ಬಾಗೇಪಲ್ಲಿ ಚೆಕ್‌ಪೋಸ್ಟ್‌ಗೆ ಯಾಕೆ ಬಂತು ಅನ್ನೋದೇ ಅನುಮಾನ. ಈ ಕಾರಣಕ್ಕಾಗಿ ಪೊಲೀಸರು ಚಿನ್ನವನ್ನು ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ. ಜೊತೆಗೆ ವಶಪಡಿಸಿಕೊಂಡ ಚಿನ್ನವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

 

Share Post