ಮೂರನೇ ಅಲೆ ಉಲ್ಬಣಿಸಿದರೇ ಕಾಂಗ್ರೆಸ್ಸಿಗರೇ ಕಾರಣ : ಬಿಜೆಪಿ
ಬೆಂಗಳೂರು : ಕೊರೊನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪಗಳನ್ನು ಶುರು ಮಾಡಿಕೊಂಡಿವೆ. ಮೂರನೇ ಅಲೆ ಹೆಚ್ಚಾಗಲು ಕಾಂಗ್ರೆಸ್ಸಿಗರೇ ಕಾರಣ ಎಂದು ಬಿಜೆಪಿ ದೂರುತ್ತಿದೆ. ಮತ್ತೊಂದು ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ, “ಲಾಕ್‌ಡೌನ್ ವಿಧಿಸಿದರೆ ಅದಕ್ಕೆ ಬಿಜೆಪಿಯೇ ನೇರ ಹೊಣೆ, ಕಾಂಗ್ರೆಸ್ ಅಲ್ಲ” ಎಂದು ಹೇಳಿದ್ದಾರೆ.
ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ಕರ್ನಾಟಕ ಕಾಂಗ್ರೆಸ್ಸಿಗರನ್ನು ದೂರುತ್ತಲೇ ಇದೆ.
ಬಿಜೆಪಿ ಯವರ ಟ್ವೀಟ್ ಇಂತಿದೆ.
ಬೆಂಗಳೂರಿಗೆ ನೀರು ಹಂಚುವುದಕ್ಕಾಗಿ ಈ ಪಾದಯಾತ್ರೆ ಎಂದು #ಸುಳ್ಳಿನಜಾತ್ರೆ ಮಾಡುತ್ತಿರುವ ಕಾಂಗ್ರೆಸ್, ವಾಸ್ತವದಲ್ಲಿ ಬೆಂಗಳೂರಿಗೆ ಕೋವಿಡ್ ರಫ್ತು ಮಾಡುತ್ತಿದೆ. ಈ ಮೂಲಕ ಕೋವಿಡ್ ಸೋಂಕಿತ ಕಾಂಗ್ರೆಸಿಗರು ಊರಿಗೆಲ್ಲ ಸೋಂಕು ಹಂಚುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣವಾದರೆ ಕಾಂಗ್ರೆಸ್ ತಬ್ಲಿಘಿಗಳೇ ನೇರ ಹೊಣೆ.
ಕಾಂಗ್ರೆಸ್ ಪಾದಯಾತ್ರೆ = ತಬ್ಲಿಘಿ ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ = ತಬ್ಲಿಘಿ
ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ.#ಸುಳ್ಳಿನಜಾತ್ರೆ #ಕೋವಿಡ್ಯಾತ್ರೆ
— BJP Karnataka (@BJP4Karnataka) January 11, 2022
ಬೆಂಗಳೂರಿಗೆ ನೀರು ಹಂಚುವುದಕ್ಕಾಗಿ ಈ ಪಾದಯಾತ್ರೆ ಎಂದು #ಸುಳ್ಳಿನಜಾತ್ರೆ ಮಾಡುತ್ತಿರುವ ಕಾಂಗ್ರೆಸ್, ವಾಸ್ತವದಲ್ಲಿ ಬೆಂಗಳೂರಿಗೆ ಕೋವಿಡ್ ರಫ್ತು ಮಾಡುತ್ತಿದೆ.
ಈ ಮೂಲಕ ಕೋವಿಡ್ ಸೋಂಕಿತ ಕಾಂಗ್ರೆಸಿಗರು ಊರಿಗೆಲ್ಲ ಸೋಂಕು ಹಂಚುತ್ತಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣವಾದರೆ ಕಾಂಗ್ರೆಸ್ ತಬ್ಲಿಘಿಗಳೇ ನೇರ ಹೊಣೆ.
— BJP Karnataka (@BJP4Karnataka) January 11, 2022