ಮನೆಯಲ್ಲೇ ಗರ್ಭಪಾತ ಮಾಡಿಸಿದ ಗಂಡ; ಮಹಿಳೆ ಸಾವು!
ಪುಣೆ; ಮಹಿಳೆಯೊಬ್ಬರಿಗೆ ಮನೆಯಲ್ಲೇ ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸಿದ್ದು, ಆಕೆ ಸಾವನ್ನಪ್ಪಿದ್ದಾಳೆ. 24 ವರ್ಷದ ಮಹಿಳೆ ಮೃತಪಟ್ಟಿದ್ದು, ಪತಿ ಹಾಗೂ ಮಾವನನ್ನು ಬಂಧಿಸಲಾಗಿದೆ..
ಮಹಾರಾಷ್ಟ್ರದ ಪುಣೆಯ ಇಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮಹಿಳೆ 4 ತಿಂಗಳ ಗರ್ಭಿಣಿಯಾಗಿದ್ದಳು. ವೈದ್ಯರೊಬ್ಬರನ್ನು ಮನೆಗೆ ಕರೆಸಿ ಗರ್ಭಪಾತ ಮಾಡಿಸಲಾಗಿತ್ತು.. ಬ್ರೂಣವನ್ನು ಜಮೀನಿನಲ್ಲಿ ಹೂಳಲಾಗಿದೆ..
ಪೊಲೀಸರು ಮೃತಳ ಅತ್ತೆಯ ವಿರುದ್ಧವು ಕೇಸ್ ದಾಖಲು ಮಾಡಿದ್ದಾರೆ.. ಗರ್ಭಪಾತ ಮಾಡಿದ ಖಾಸಗಿ ವೈದ್ಯನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ..
2017 ರಲ್ಲಿ ಮೃತ ಮಹಿಳೆಗೆ ವಿವಾಹವಾಗಿತ್ತು.. ಇವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡಾ ಇದೆ.. ಗರ್ಭಪಾತದ ನಂತರ ಮಹಿಳೆಗೆ ತೀವ್ರ ರಕ್ತಸ್ರಾವ ಆಗಿತ್ತು.. ಹೀಗಾಗಿ ಮೃತಪಟ್ಟಿದ್ದಾಳೆ.