BusinessEconomyTechTechnology

ಅಕ್ಟೋಬರ್‌ 12ಕ್ಕೆ ಭಾರತದಲ್ಲಿ 5G ಸೇವೆ ಆರಂಭ; ಸಕಲ ಸಿದ್ಧತೆ

ನವದೆಹಲಿ: ಭಾರತದಲ್ಲಿ 5G ಸೇವೆಗಳನ್ನು ಆರಂಭಿಸಲು ದಿನಗಣನೆ ಆರಂಭವಾಗಿದೆ.  ಸರಿಯಾಗಿ ಇನ್ನು ಒಂದೂವರೆ ತಿಂಗಳಿಗೆ ದೇಶದಲ್ಲಿ 5G ಸೇವೆ ಆರಂಭವಾಗಲಿದೆ. ಏರ್​ಟೆಲ್ ಮತ್ತು ಜಿಯೊ ಕಂಪನಿಗಳು 5ಜಿ ಸೇವೆ ಒದಗಿಸಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿವೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಪ್ರಾಯೋಗಿಕ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿವೆ. ಭಾರತದಲ್ಲಿ 5ಜಿ ಸೇವೆಗಳು ಅಕ್ಟೋಬರ್ 12ರಿಂದ ಆರಂಭವಾಗಲಿದೆ. ಮೊದಲ ಹಂತದಲ್ಲಿ ಬೆಂಗಳೂರು, ಅಹಮದಾಬಾದ್, ಛತ್ತೀಸಗಡ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್​ನಗರ್, ಕೊಲ್ಕತ್ತಾ, ಲಖನೌ, ಮುಂಬೈ ಮತ್ತು ಪುಣೆ ನಗರಗಳಲ್ಲಿ 5ಜಿ ಸೇವೆಗಳು ಲಭ್ಯವಾಗಲಿವೆ ಎಂದು ತಿಳಿದು ಬಂದಿದೆ. ಇನ್ನೊಂದು ವರ್ಷದಲ್ಲಿ ದೇಶದ ಮೂಲೆಮೂಲೆಗಳಲ್ಲಿ 5ಜಿ ತಂತ್ರಜ್ಞಾನ ಲಭ್ಯವಾಗಿದ್ದು, ಜನರ ಕೈಗೆಟುಕುವ ಬೆಲೆಯಲ್ಲಿ 5ಜಿ ಲಭ್ಯವಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

 

Share Post