Bengaluru

ಎಂಇಎಸ್‌ ನಿಷೇಧಕ್ಕೆ ಹೋರಾಟ: ಡಿ.31ಕ್ಕೆ ರಾಜ್ಯ ಬಂದ್?‌

ಬೆಂಗಳೂರು: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬ್ಯಾನ್‌ ಮಾಡುವಂತೆ ಆಗ್ರಹಿಸಿ ರಾಜ್ಯದಲ್ಲಿ ಬಂದ್‌ ನಡೆಸಲು ಕರವೇ ನಾಕಯರು ತೀರ್ಮಾನ ಮಾಡಿದ್ದಾರೆ. ಇದೇ ಡಿಸೆಂಬರ್‌ 31ರಂದು ರಾಜ್ಯ ಬಂದ್‌ ಮಾಡಲು ಇಂದು ಸಭೆ ಕರೆದಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಸಭೆಯಲ್ಲಿ ಬಂದ್‌ನ ರೂಪುರೇಷೆಗಳನ್ನು ಸಿದ್ದಪಡಿಸಲಿದ್ದಾರೆ.

ಈ ಬಗ್ಗೆ ನಿನ್ನೆಯೇ ವಾಟಾಳ್‌ ನಾಗರಾಜ್‌ ಅವರು ಸಭೆ ನಡೆಸಿ ಬಂದ್‌ ನಡೆಸುವಂತೆ ಸೂಚನೆ ಕೊಟ್ಟಿದ್ರು. ಬಂದ್‌ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಓಲಾ-ಊಬರ್‌, ವ್ಯಾಪಾರ-ವರ್ತಕರು ಬೆಂಬಲ ನೀಡಲು ಒಪ್ಪಿಕೊಂಡಿದ್ದಾರೆ. ಕನ್ನಡದ ಬಗ್ಗೆ ಸರ್ಕಾರದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬೆಲೆ ಇಲ್ಲ, ಎಂಇಎಸ್‌ ನಿಷೇಧ ಮಾಡುವುದು ಪ್ರಮುಖವಾದ ಅಂಶ. ಇದರ ಬಗ್ಗೆ ಸರ್ಕಾರ ಆಗಲಿ ವಿಪಕ್ಷಗಳಾಗಲಿ ಬೇರೆ ಮಾತನಾಡುವ ಹಾಗಿಲ್ಲ, ಆದ್ರೆ ಅದನ್ನು ಬಿಟ್ಟು ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಮಾತನಾಡ್ತಿದಾರೆ.

ಮಹಾರಾಷ್ಟ್ರದವರು ಮತ್ತೆ ಮತ್ತೆ ನಮ್ಮ ಭಾವನೆಗಳನ್ನು ಕೆಣಕುವ ಕೆಲಸ ಮಾಡ್ತಿದಾರೆ. ಇಂದು ಕೂಡ ನಮ್ಮ ಕನ್ನಡ ಬಾವುಟವನ್ನು ಸುಟ್ಟಿದ್ದಾರೆ. ಇದಕ್ಕೊಂದು ಅಂತ್ಯ ಹಾಡಬೇಕಂದ್ರೆ ಬಂದ್‌ ಮಾಡಬೇಕು ಅದನ್ನು ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

Share Post