BengaluruTechTechnology

18 ಚಿನ್ನದ ಪದಕ ಪಡೆದ ವಿಟಿಯು ವಿದ್ಯಾರ್ಥಿ ಮುರಳಿ

ಬೆಳಗಾವಿ; ವಿಟಿಯು ಘಟಿಕೋತ್ಸವದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಎಸ್‌.ಮುರಳಿ 18 ಚಿನ್ನದ ಪದಕ ಪಡೆದುಕೊಂಡು ಗಮನ ಸೆಳೆದಿದ್ದಾರೆ. ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಯಾಗಿರುವ ಎಸ್‌.ಮುರಳಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು. ಅವರ ಅಪ್ರತಿಮ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಮುರಳಿ ಅವರ ತಂದೆ ಎಚ್‌ಕೆಬಿಕೆ ಎಂಜಿನಿಯರಿಂಗ್‌ ಕಾಲೇಜಿನ ಲ್ಯಾಬ್‌ ಇನ್‌ಸ್ಟ್ರಕ್ಟರ್‌ ಆಗಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ವಿಟಿಯುನ 25 ವರ್ಷಗಳ ಇತಿಹಾಸದಲ್ಲೇ ಇದು ಅತಿಹೆಚ್ಚು ಚಿನವನದ ಪದಕ ಪಡೆದ ಗೌರವಕ್ಕೆ ಮುರಳಿ ಪಾತ್ರರಾಗಿದ್ದಾರೆ. ಇನ್ನು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಕುರುಂಜಿ ವೆಂಕಟರಮನಗೌಡ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಎಸ್.ಕೃತಿ ಅವರು 8 ಚಿನ್ನದ ಪದಕಗಳ ಮೂಲಕ ವಿಶ್ವವಿದ್ಯಾಲಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

 

Share Post