Sports

ಆಶಸ್‌ ಸರಣಿ : ಆಸೀಸ್‌ಗೆ ಭರ್ಜರಿ ಗೆಲುವು

ಅಡಿಲೇಡ್‌ : ಇಂಗ್ಲೆಂಡ್‌ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 275 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.  ಈ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸೀಸ್‌ ಪಡೆ ಎರಡು ಪಂದ್ಯ ಗೆದ್ದು ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ.

ಹಗಲು ರಾತ್ರಿ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಂಗ್ಲಾ ಪಡೆಯು ಸೋಲಿನ ಅಂಚಿನಿಂದ ತಪ್ಪಿಸಿಕೊಳ್ಳಲು ಪ್ರಯಾಸ ಪಟ್ಟಿತು. 192 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಒಪ್ಪಿಕೊಂಡಿತು.

ಪ್ಯಾಟ್‌ಕಮಿನ್ಸ್‌ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಸ್ಟೀವ್‌ ಸ್ಮಿತ್‌ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ.

Share Post