Sports

ಅನ್‌ ಸೋಲ್ಡ್‌ ಆದರೂ ಐಪಿಎಲ್‌ ಆಡಲು ಅವಕಾಶ ಇದೆ

ಬೆಂಗಳೂರು : IPL 2022 15ನೇ ಆವೃತ್ತಿಗೆ ಮೆಗಾ ಆಕ್ಷನ್‌ ನೆರವೇರಿತು. ಸಾಕಷ್ಟು ಆಶ್ಚರ್ಯಗಳಿಗೆ ಕಾರಣವಾದ ಈ ಹರಾಜಿನಲ್ಲಿ ಕೆಲವು ಸ್ಟಾರ್‌ ಆಟಗಾರರೇ ಅನ್‌ಸೋಲ್ಡ್‌ ಆಗಿ ಉಳಿದಿದ್ದರೆ. ಐಪಿಎಲ್‌ನಂತಹ ಹೊಡಿ ಬಡಿ ಆಟದಲ್ಲಿ ಗುರುತಿಸಿಕೊಂಡ ಸ್ಟಾರ್‌ ಆಟಗಾರರೇ ಅನ್‌ಸೋಲ್ಡ್‌ ಆದರೆ ಖಂಡಿತ ಅದು ವಿಪರ್ಯಾಸ ಎನ್ನಬಹುದಾಗಿದೆ.

ಮಿಸ್ಟರ್‌ ಐಪಿಎಲ್‌ ಎನಿಸಿಕೊಂಡ ಸುರೇಶ್‌ ರೈನಾ, ವರ್ಲ್ಡ್‌ಕಪ್‌ ವಿಜೇತ ನಾಯಕ ಎವನ್‌ ಮಾರ್ಗನ್‌,‌ ಆಸ್ಟ್ರೇಲಿಯಾ ಸ್ಟೀವ್‌ ಸ್ಮಿತ್, ಆರನ್‌ ಫಿಂಚ್‌, ಡೇವಿಡ್‌ ಮಿಲ್ಲರ್‌ ಇನ್ನು ಹಲವರು ಈ ಬಾರಿಯ ಐಪಿಎಲ್‌ ಮೆಗಾ ಹರಾಜಿನಲ್ಲಿ ಬಿಕರಿ ಆಗದೆ ಉಳಿದುಕೊಂಡಿದ್ದಾರೆ.

ಹರಾಜು ಮುಗಿದಿದೆ ಆದರೂ ಇವರಿಗೆ ಅವಕಾಶದ ಬಾಗಿಲು ಇನ್ನು ಮುಚ್ಚಿಲ್ಲ. ತಂಡದಲ್ಲಿ ಯಾರಾದರೂ ಒಬ್ಬ ಆಟಗಾರರಿಗೆ ಗಾಯದ ಸಮಸ್ಯೆಯಿಂದ ಅಥವಾ ಇನ್ಯಾವುದೋ ಕಾರಣಕ್ಕೆ ತಂಡದಿಂದ ಹೊರಗುಳಿದರೆ ಈ ಆಟಗಾರರನ್ನು ಬದಲಿ ಆಟಗಾರರಾಗಿ ತೆಗೆದುಕೊಳ್ಳಲು ಅವಕಾಶ ಇದೆ.

ಆ ರೀತಿ ಬದಲಿ ಆಟಗಾರರಾಗಿ ತಂಡಕ್ಕೆ ಬಂದು ಸಾಕಷ್ಟು ಆಟಗಾರರು ಮಿಂಚು ಹರಿಸಿದ್ದಾರೆ. ಉದಾಹರಣೆಗೆ ಕ್ರಿಸ್‌ ಗೇಯ್ಲ್.‌ ಅವರು ಆರ್‌ಸಿಬಿ ತಂಡವನ್ನು ಸೇರಿದ್ದು ಬದಲಿ ಆಟಗಾರರಾಗಿ ಎಂಬುದು ವಿಶೇಷ.

Share Post