National

ಬಿಹಾರದಲ್ಲಿ ಭೀಕರ ಅಪಘಾತ; ಎಂಟು ಕಾರ್ಮಿಕರ ದುರ್ಮರಣ

ಪುರ್ನಿಯಾ; ಬಿಹಾರದ ಪುರ್ನಿಯಾದ ಜಲಾಲ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್‌ ಉರುಳಿಬಿದ್ದ ಪರಿಣಾಮವಾಗಿ ಎಂಟು ಕಾರ್ಮಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟ್ರಕ್‌ನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದು, ಇದ್ರಲ್ಲಿ ನಾಲ್ವರು ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 57ರಲ್ಲಿ ಪೈಪ್ ತುಂಬಿದ ಟ್ರಕ್​ ಪಲ್ಟಿಯಾಗಿ ಈ ದುರಂತ ನಡೆದಿದೆ. ಆದ್ರೆ ಇದಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಅಪಘಾತದ ನಂತರ ಟ್ರಕ್‌ ಚಾಲಕ ಪರಾರಿಯಾಗಿದ್ದಾನೆ. ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Share Post