DistrictsSports

ಸಿದ್ದಗಂಗಾ ಮಠಕ್ಕೆ ಕ್ರಿಕೆಟಿಗ ರಾಹುಲ್ ಭೇಟಿ; ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ

ತುಮಕೂರು; ಕ್ರಿಕೆಟ್ ಆಟಗಾರ ಕೆ.ಎಲ್‌.ರಾಹುಲ್‌ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಶಿವಕುಮಾರ ಸ್ವಾಮಿಗೆ ಗದ್ದುಗೆ ದರ್ಶನ ಪಡೆದ ಅವರು, ನಮನ ಸಲ್ಲಿಸಿದರು. ಅನಂತರ ಸಿದ್ದಲಿಂಗಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಅವರ ತಂದೆ ಲೋಕೇಶ್‌ ಕೂಡಾ ಇದ್ದರು.

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕಣ್ಣೂರು ಗ್ರಾಮದ ಲೋಕೇಶ್‌ ಅವರ ಪುತ್ರನೇ ಕೆ.ಎಲ್‌.ರಾಹುಲ್‌. ಇವರು ಮೊದಲಿನಿಂದಲೂ ಸಿದ್ದಗಂಗಾ ಮಠದ ಭಕ್ತರು. ಅವರ ತಂದೆ ಲೋಕೇಶ್‌ ಅವರಂತೂ ಯಾವಾಗಲೂ ಮಠಕ್ಕೆ ಭೇಟಿ ಕೊಡುತ್ತಿರುತ್ತಾರೆ. ಇಂದೂ ಕೂಡಾ ಲೋಕೇಶ್‌ ಅವರು ತಮ್ಮ ಪತ್ನಿ ಲೋಕೇಶ್ವರಿ ಜೊತೆಯಲ್ಲಿ ಮಾಗ ಕೆ.ಎಲ್‌.ರಾಹುಲ್‌ ಅವರನ್ನು ಮಠಕ್ಕೆ ಕರೆ ತಂದಿದ್ದರು.

ಶ್ರೀಸಿದ್ದಲಿಂಗಸ್ವಾಮೀಜಿ ಅವರ ಪೂವಾಶ್ರಮದ ಊರು ಕೂಡ ರಾಮನಗರ ಜಿಲ್ಲೆಯೇ ಆಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಕೆ.ಎಲ್‌.ರಾಹುಲ್‌ ಹಾಗೂ ಅವರ ಕುಟುಂಬದ ಜೊತೆಗೆ ಲೋಕಾಭಿರಾಮವಾಗಿ ಚರ್ಚಿಸಿದರು. ಅಲ್ಲದೆ ರಾಹುಲ್ ಅವರ ಸ್ವಂತ ಚಿಕ್ಕಪ್ಪ ಸಿದ್ದಗಂಗಾ ಮಠದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್‌ ಕುಟುಂಬಕ್ಕೂ ಸಿದ್ದಗಂಗಾ ಮಠಕ್ಕೂ ನಂಟಿದೆ. ಹೀಗಾಗಿ ರಾಹುಲ್‌ ಅವರು ಕೂಡಾ ಆಗಾಗ ಸಿದ್ದಗಂಗಾ ಮಠಕ್ಕೆ ಬರುತ್ತಿದ್ದರು. ಅವರು ಟೀಂ ಇಂಡಿಯಾದಲ್ಲಿ ಆಡಲು ಶುರು ಮಾಡಿದ ಮೇಲೆ ಸಿದಗಂಗಾ ಮಠಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಅವರು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇದೇ ವೇಳೆ ಸಿದ್ದಲಿಂಗ ಶ್ರೀಗಳು ರಾಹುಲ್‌ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಇದೇ ವೇಳೆ ನಡೆದ ಸಮಾರಂಭದಲ್ಲಿ ರಾಹುಲ್‌ ಅವರು ಮಾತನಾಡಿದರು.

Share Post