Sports

IPL 2022 Big Update : ವಿವೋ ಬದಲಿಗೆ ಟಾಟಾ ಟೈಟಲ್‌ ಸ್ಪಾನ್ಸರ್

ಮುಂಬೈ : ಅತಿ ಶ್ರೀಮಂತ ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿರುವ ಐಪಿಎಲ್‌ ನಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ಇಷ್ಟು ದಿನ ಟೈಟಲ್‌ ಸ್ಪಾನ್ಸರ್‌ ಆಗಿದ್ದ ವಿವೋ ಅವರನ್ನು ಟಾಟಾ ಹಿಂದಿಕ್ಕಿ ಟೈಟಲ್‌ ಸ್ಪಾನ್ಸರ್‌ ಆಗಿದೆ. ಐಪಿಎಲ್‌ ಚೇರ್‌ಮನ್‌ ಆಗಿರುವ ಬ್ರಿಜೇಶ್‌ ಪಟೇಲ್‌ ಅವರೇ ಈ ವಿಷಯವನ್ನು ಕನ್ಫರ್ಮ್‌ ಮಾಡಿದ್ಧಾರೆ.

ಚೀನಿ ಮೊಬೈಲ್‌ ಸಂಸ್ಥೆಯಾಗಿದ್ದ ವಿವೋ ಅವರ ಜೊತೆ ಐಪಿಎಲ್‌ ತನ್ನ ಅಸೋಸಿಯೇಷನ್‌ ಅನ್ನು ಅಂತ್ಯಗೊಳಿಸುತ್ತಿದೆ. 2022 ರ ಋತುವಿನಿಂದ IPL ನ ಶೀರ್ಷಿಕೆ ಪ್ರಾಯೋಜಕರಾಗಿ ಟಾಟಾ ಬರಲಿದೆ. 

ಮಂಗಳವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಯೋಜಕತ್ವ ಬದಲಾವಣೆ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
15ನೇ ಸೀಸನ್‌ ಇಂದ ಟಾಟಾ ಟೈಟಲ್‌ ಸ್ಪಾನ್ಸರ್‌ ಮಾಡಿರುವುದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ

ಮುಂಚೆ ಟೈಟಲ್‌ ಸ್ಪಾನ್ಸರ್‌ ಮಾಡಿದ್ದವರು
DLF (2008 -2012)
Pepsi (2013 - 2015)
vivo (2016 - 2019)
dream 11 (2020) 
Vivo (2021) 

 

Share Post