Cinema

ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ನಟ ಅಕ್ಷಯ್:‌ ಇಲ್ಲಿದೆ ಅಸಲಿಯತ್ತು

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕಳ್ಳತನ ಮಾಡಲು ಸಿಕ್ಕಿಹಾಕಿಕೊಂಡು ಪರಿಪಾಟಲು ಬಿದ್ದಿದ್ದಾರೆ. ಅಷ್ಟಕ್ಕೂ ಇವರು ಕಳ್ಳತನ ಮಾಡಲು ಹೋಗಿದ್ದ ಮನೆ ಯಾರದ್ದು ಗೊತ್ತಾ..? ಬಹುಭಾಷಾ ನಟಿ ಸಮಂತಾ ಅವರದ್ದು. ಏನಿದು ಸೀರಿಯಸ್‌ ಅಂದ್ಕೊಂಡ್ರಾ ಅಲ್ಲಾ..ರೀ ಅಕ್ಷಯ್‌ ಕುಮಾರ್‌ ಸಮಂತಾ ಮೊದಲ ಬಾರಿಗೆ ಒಂದು ಜಾಹೀರಾತಿಗಾಗಿ ಒಟ್ಟಿಗೆ ಬಣ್ಣ ಹಚ್ಚಿದ್ದಾರೆ.

ಕುರ್ಕುರೆ.. ಜಾಹೀರಾತಿನಲ್ಲಿ ಅಕ್ಷಯ್‌ ಕುಮಾರ್‌ ಸಮಂತಾ ಮನೆಗೆ ಕನ್ನ ಹಾಕಲು ಹೋಗಿರುತ್ತಾರೆ. ಮನೆಯಲ್ಲಿ ವಸ್ತುಗಳನ್ನು ಕದಿಯುವ ವೇಳೆ ಅಚಾನಕ್‌ ಆಗಿ ಅಕ್ಷಯ್‌ ಕುಮಾರ್‌ಗೆ ಕುರ್ಕುರೆ ಕಣ್ಣಿಗೆ ಬೀಳುತ್ತೆ..ಅದು ಮಸಾಲೆಯುಕ್ತ ಕುರ್ಕುರೆ. ಅದನ್ನು ತೆಗೆದುಕೊಳ್ಳುವಾಗ ಸಮಂತಾ ಕಣ್ಣಿಗೆ ಬಿದ್ದು ಪೇಚಿಗೆ ಸಿಲುಕುತ್ತಾರೆ. ಈ ವಿಡಿಯೋವನ್ನು ಸ್ವತಃ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿಕೊಂಡಿರುವ ಅಕ್ಷಯ್‌ ಕುರ್ಕುರೆ ತಿನ್ನುವಾಗ ಸಮಂತಾ ನನ್ನನ್ನು ಪೊಲೀಸರಿಗೆ ಒಪ್ಪಿಸುವ ಪ್ಲಾನ್‌ ಮಾಡಿದ್ದಾರೆ ಎಂಬ ಪೋಸ್ಟ್‌ ಹಾಕಿದ್ದಾರೆ.

ಈ ವಿಡಿಯೋ ನೋಡಿ ಫ್ಯಾನ್ಸ್‌ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಅಕ್ಷಯ್‌ ಕುಮಾರ್‌ಗೆ ತಿನಿಸಿನ ಮೇಲಿರುವ ಆಸೆ. ಸಮಂತಾ ಕಳ್ಳನನ್ನು ಹಿಡಿಯಲು ಮಾಡಿರುವ ಪ್ಲಾನ್‌ ಎಲ್ಲವೂ ಜಾಹೀರಾತಿನಲ್ಲಿ ತುಂಬಾ ಚನ್ನಾಗಿನ ಮೂಡಿಬಂದಿದೆ.

Share Post