Bengaluru

ಟೋಯಿಂಗ್‌ ವ್ಯವಸ್ಥೆಗೆ ತಾತ್ಕಾಲಿಕ ತಡೆ: ಆರಗ ಜ್ಞಾನೇಂದ್ರ

ಬೆಂಗಳೂರು: ವಾಹನ ಸವಾರರಿಗೆ ತಲೆನೋವಾಗಿದ್ದ ಟೋಯಿಂಗ್‌ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ನಗರದಲ್ಲಿ ಸಿಕ್ಕ ಸಿಕ್ಕಲ್ಲೆಲ್ಲಾ ವಾಹನಗಳನನ್ನು ಎತ್ತಂಗಡಿ ಮಾಡ್ತಿದ್ದವರ ವಿರುದ್ಧ ವಾಹನ ಸವಾರರು ತಿರುಗಿ ಬಿದ್ದಿದ್ರು. ಹಾಗಾಗಿ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಇದಕ್ಕೊಂದು ಪರಿಹಾರ ಸೂಚಿಸಿದ್ದಾರೆ.

ಈ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಆರಗ ಜ್ಞಾನೇಂದ್ರ ಮಾತನಾಡಿ, ಇನ್ಮುಂದೆ ಟೋಯಿಂಗ್‌ ವ್ಯವಸ್ಥೆ ಇರುವುದಿಲ್ಲ. ಸರಳೀಕೃತ ವ್ಯವಸ್ಥೆ ಜಾರಿಯಾಗುವವರೆಗೂ ಪೊಲೀಸರೇ ದಂಡ ವಿಧಿಡಸುತ್ತಾರೆ. ನೋ ಪಾರ್ಕಿಂಗ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲೇಬೇಕು ಎಂದು ಗೃಹ ಸಚಿವ ಸೂಚನೆ ನೀಡಿದ್ರು.

ಇನ್ನೂ ನೋ ಪಾರ್ಕಿಂಗ್‌ ಬೋರ್ಡ್‌ಗಳನ್ನು ಹೆಚ್ಚಾಗಿ ಅಳವಡಿಸುತ್ತೇವೆ. ಈ ಬಗ್ಗೆ ವಾಹನ ಸವಾರರಿಗೆ ಸೂಕ್ತ ಮಾಹಿತಿ ನೀಡಿ ಯಾವ ಯಾವ ಕಡೆ, ಎಲ್ಲೆಲ್ಲಿ ವಾಹನ ನಿಲುಗಡೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ವಾಹನ ಸವಾರರ ಒತ್ತಾಯದ ಮೇರೆಗೆ ಈ ನಿರ್ಧಾರವನ್ನು ಮಾಡಲಾಗಿದೆ. ಮತ್ತೊಮ್ಮೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಇದಕ್ಕೊಂದು ಶಾಶ್ವತ ಪರಿಹಾರ ಸೂಚಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ರು.

Share Post