IND VS SA Test 3 : ವಿರಾಟ್ ಕೊಹ್ಲಿ ಲಭ್ಯ, ಸಿರಾಜ್ ಅಲಭ್ಯ
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಾಳೆಯಿಂದ ಶುರುವಾಗಲಿದೆ. ಕಳೆದ ಪಂದ್ಯದಲ್ಲಿ ಬೆನ್ನು ನೋವಿನ ಕಾರಣ ಎರಡನೇ ಟೆಸ್ಟ್‌ನಿಂದ ವಿರಾಟ್ ದೂರ ಉಳಿದಿದ್ದರು. ಇನ್ನು ಕೆ.ಎಲ್ ರಾಹುಲ್ ನಾಯಕ ಎಂದಾಗ ಎಲ್ಲರಿಗೂ ಶಾಕ್ ಆಗಿತ್ತು. ಕಾರಣ ತಿಳಿದ ನಂತರ ಕೊಹ್ಲಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗ ಸರಣಿ ಸಮ ಬಲವಾಗಿದೆ. ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ವಿರಾಟ್ ಕೊಹ್ಲಿ ನಾಳಿನ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಐತಿಹಾಸಿಕ ಗೆಲುವಾಗುತ್ತದೆ. ಒಂದು ವೇಳೆ ಸರಣಿ ಡ್ರಾ ಆದರೂ ಕೂಡ ಅದು ಒಂದು ಸಾಧನೆ ಆಗುತ್ತದೆ. ಏಷ್ಯದ ಯಾವುದೇ ತಂಡವು ದ.ಆಫ್ರಿಕಾದಲ್ಲಿ ಇದುವರೆಗೂ ಟೆಸ್ಟ್ ಸರಣಿ ಜಯಿಸಿಲ್ಲ. ಹಾಗಾಗಿ ಗೆಲ್ಲಬೇಕೆಂಬ ಛಲದಿಂದ ಭಾರತ ಕಣಕ್ಕಿಳಿಯಲಿದೆ.
ಈ ಬಾರಿ ಸ್ಟ್ರಾಂಗ್ ತಂಡವನ್ನು ಕಣಕ್ಕಿಳಿಸಬೇಕು ಎಂದುಕೊಂಡಿದ್ದ ಭಾರತಕ್ಕೆ ಶಾಕ್ ಎದುರಾಗಿದೆ. ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಅವರು ಮೂರನೇ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಮಂಡಿ ನೋವಿನ ಕಾರಣ ಮೊಹಮ್ಮದ್ ಸಿರಾಜ್ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಸಿರಾಜ್ ಬದಲು ತಂಡದಲ್ಲಿ ಉಮೇಶ್ ಯಾದವ್ ಅಥವಾ ಇಶಾಂತ್ ಶರ್ಮ ಆವರು ಸ್ಥಾನ ಪಡೆಯಲಿದ್ದಾರೆ.
ಇನ್ನು ಹನುಮ ವಿಹಾರಿ ಗಮನಾರ್ಹ ಪ್ರದರ್ಶನ ನೀಡಿರುವ ಕಾರಣ ಅವರನ್ನು ಮೂರನೇ ಟೆಸ್ಟ್‌ನಲ್ಲಿ ಆಡಿಸುವ ಎಲ್ಲಾ ಸಾಧ್ಯತೆಗಳಿದೆ. ಒಂದು ವೇಳೆ ಹನುಮಾ ವಿಹಾರಿ ಆಡಿದಲ್ಲಿ ಮತ್ತೊಬ್ಬ ಆಟಗಾರನನ್ನು 11ರ ಪಟ್ಟಿಯಿಂದ ಕೈ ಬಿಡಬೇಕಾಗುತ್ತದೆ.