Sports

Ind Vs Sa Test 3 : ಮೊದಲ ಇನ್ನಿಂಗ್ಸ್‌, ಭಾರತ 223 ರನ್‌ಗೆ ಆಲೌಟ್

ಕೇಪ್‌ಟೌನ್‌ : ಮೂರನೇ ಟೆಸ್ಟ್‌ ಪಂದ್ಯ ಆರಂಭವಾಗಿದ್ದು, ಭಾರತ ತಂಡವು ಮೊದಲ ಇನ್ನಿಂಗ್ಸ್‌ ಅಂತ್ಯಕ್ಕೆ 223 ರನ್‌ಗೆ ಆಲೌಟ್‌ ಆಗಿದೆ. ವಿರಾಟ್‌ ಕೊಹ್ಲಿ, ಮತ್ತು ಪೂಜಾರಾ ಹೊರತು ಪಡಿಸಿ ಮಿಕ್ಕವರೆಲ್ಲರೂ ಕಡಿಮೆ ಮೊತ್ತಕ್ಕೆ ವಿಕೆಟ್‌ ಚೆಲ್ಲಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ, ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದಾಗಿ 200ರನ್‌ಗಳ ಗಡಿ ದಾಟಿತು. ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಉತ್ತಮ ಪಾರ್ಟನರ್ಶಿಪ್‌ ನೀಡಿದರು. ಅಜಿಂಕ್ಯ ರಹಾನೆ ಎಂದಿನಂತೆ ಈ ಬಾರಿಯೂ ಅಲ್ಪ ಮೊತ್ತಕ್ಕೆ ಔಟ್‌ ಆಗಿ ನಿರಾಸೆ ಮೂಡಿಸಿದ್ದಾರೆ.

ದ.ಆಫ್ರಿಕಾ ಪರ ಕಗಿಸೊ ರಬಾಡ 4 ಮತ್ತು ಮಾರ್ಕೊ ಜಾನ್ಸೆನ್ 3 ವಿಕೆಟ್ ಪಡೆದರು. ನಂತರ ಬ್ಯಾಟಿಂಗ್‌ ಆರಂಭಿಸಿದ ದ.ಆಫ್ರಿಕಾ ಒಂದು ವಿಕೆಟ್‌ ಕಳೆದುಕೊಂಡು 17 ರನ್‌ಗಳಿಸಿದೆ.

Share Post