ಮೊದಲ ಪಂದ್ಯವೇ ಯು ಮುಂಬಾಗೆ ರೋಚಕಗೆಲುವು
ಬೆಂಗಳೂರು: ಪ್ರೊ ಕಬಡ್ಡಿ ಹಬ್ಬಕ್ಕೆ ಇಂದು ಚಾಲನೆ ಸಿಕ್ಕಿದೆ. ಹೌದು, ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ಪ್ರೋ ಕಬ್ಬಡಿ ಮೊದಲ ಪಂದ್ಯವೇ ಸಾಕಷ್ಟ ರೋಚಕತೆಯಿಂದ ಕೂಡಿತ್ತು. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಂತ್ಯದಲ್ಲಿ ಎಡವಿದ್ದಾರೆ. ಯು ಮುಂಬಾಗೆ ಬಲಿಷ್ಠ ಪೈಪೋಟಿ ನೀಡಿದ್ದ ಬೆಂಗಳೂರು ಬುಲ್ಸ್ ಕೊನೆಯ ಹಂತದಲ್ಲಿ ಸ್ಟ್ಯಾಟರ್ಜಿ ಸರಿಯಿಲ್ಲದೇ ಸೋತಿದೆ. ಪವನ್ಕುಮಾರ್ ಆರಂಭದಲ್ಲಿ ಅಬ್ಬರಿಸಿದ್ದರೆ, ಸೆಕೆಂಡ್ ಹಾಫ್ನಲ್ಲಿ ಅವರ ಆಟ ನಡೆಯಲಿಲ್ಲ. ಕೇವಲ ಪಂದ್ಯ ಮುಗಿಯಲು ಕೇವಲ 5 ನಿಮಿಷ ಇರುವಾಗ ಬೆಂಗಳೂರು ಬುಲ್ಸ್ ತಂಡ ಯು ಮುಂಬಾಗೆ ಹೆಚ್ಚು ಪಾಯಿಂಟ್ಸ್ ನೀಡಿತು. ಹೀಗಾಗಿ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್ ತಂಡ ಎಡವಿತು. ಬೆಂಗಳೂರು ಬುಲ್ಸ್ 30 ಅಂಕ ಗಳಿಸಿದ್ರೆ, ಯು ಮುಂಬಾ 46 ಅಂಕಗಳಿಸಿ ಗೆದ್ದು ಬೀಗಿದೆ. ಓಪೆನಿಂಗ್ ಪಂದ್ಯದಲ್ಲಿ ಎರಡು ತಂಡದ ಆಟಗಾರರ ರಣರೋಚಕ ಪ್ರದರ್ಶನ ನೀಡಿದ್ದರು. ಫಸ್ಟ್ ಹಾಫ್ ಅಂತ್ಯಕ್ಕೆ ಬೆಂಗಳೂರು ತಂಡ ಒಟ್ಟು 17 ಅಂಕ ಗಳಿಸಿತ್ತು. ಯು ಮುಂಬಾ 24 ಅಂಕ ಗಳಿಸಿ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಬುಲ್ಸ್ ಪರವಾಗಿ 6 ಬಾರಿ ರೈಡ್ ಮಾಡಿ ಚಂದ್ರನ್ ರಂಜಿತ್ 9 ಅಂಕಗಳಿಸಿದರೆ, ಅತ್ತ ಯು ಮುಂಬಾ ತಂಡದ ಅಭಿಷೇಕ್ ಸಿಂಗ್ 11 ಬಾರಿ ರೈಡ್ ಮಾಡಿ 14 ಅಂಕಗಳಿಸಿದರು. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡಿಸಿದರು. ಸ್ಟಾರ್ ಆಟಗಾರರಿದ್ದರೂ ಕೊನೆ ಹಂತದಲ್ಲಿ ಬೆಂಗಳೂರು ಬುಲ್ಸ್ ಸೋಲು ಕಂಡಿದೆ.