Politics

ಬೆಂಗಳೂರು ಗ್ರಾ., ಮೈಸೂರಿನಲ್ಲಿ ಗೆಲ್ಲೋರು ಯಾರು..?; ಕಾಂಗ್ರೆಸ್‌ ಪಟ್ಟಿಯಲ್ಲಿರುವ 14 ಕ್ಷೇತ್ರಗಳು ಯಾವುವು..?

ಬೆಂಗಳೂರು; ಇನ್ನೇನು ಜೂನ್‌ 4ನೇ ತಾರೀಖು ಹತ್ತಿರಕ್ಕೆ ಬರುತ್ತಿದೆ.. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಲಿದೆ ಅನ್ನೋದು ಇನ್ನು ಒಂದು ವಾರದಲ್ಲಿ ಗೊತ್ತಾಗಲಿದೆ.. ಈ ನಡುವೆ ಎಲ್ಲಾ ಪಕ್ಷಗಳಲ್ಲೂ ಲೆಕ್ಕಾಚಾರಗಳು ಶುರುವಾಗಿವೆ.. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಎಷ್ಟು ಸ್ಥಾನ ಗೆಲ್ಲಬಹುದು ಎಂಬುದರ ಬಗ್ಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಲ್ಲಿ ಆಂತರಿಕ ಲೆಕ್ಕಾಚಾರ ಮಾಡಲಾಗಿದೆಯಂತೆ.. ಅದರಲ್ಲೂ ಕಾಂಗ್ರೆಸ್‌ ನಾಯಕರು ಕನಿಷ್ಠ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ..

ಕಾಂಗ್ರೆಸ್‌ಗೆ ವಿಶ್ವಾಸವಿರುವ ಕ್ಷೇತ್ರಗಳು ಯಾವುವು..?

ಚಾಮರಾಜನಗರ

ಚಿಕ್ಕೋಡಿ

ಬೀದರ್‌

ರಾಯಚೂರು

ಕೊಪ್ಪಳ

ಚಿತ್ರದುರ್ಗ

ಬೆಂಗಳೂರು ಗ್ರಾಮಾಂತರ

ಬೆಳಗಾವಿ

ದಾವಣಗೆರೆ

ಹಾಸನ

ಕಲಬುರಗಿ

ಬಳ್ಳಾರಿ

ತುಮಕೂರು

ಬೆಂಗಳೂರು ದಕ್ಷಿಣ

ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವಿನ ವಿಶ್ವಾಸ ಇದೆ ಎನ್ನಲಾಗಿದೆ.. ಆದ್ರೆ ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಫಿಫ್ಟಿ ಫಿಫ್ಟಿ ಚಾನ್ಸಸ್‌ ಇದೆ ಎಂದು ಹೇಳಲಾಗುತ್ತಿದೆ.. ಜೊತೆಗೆ ಹಾಸನ, ಶಿವಮೊಗ್ಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೂಡಾ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ ಎಂದು ಹೇಳಲಾಗುತ್ತಿದೆ..

Share Post