ಮೋದಿಗೆ ರಾವಣ ಎಂದು ಟೀಕೆ; ಇನ್ನೂ ಯಾರನ್ನೂ ಟೀಕಿಸಲ್ಲ ಎಂದ ಖರ್ಗೆ
ಅಹಮದಾಬಾದ್; ನಾನು ಯಾವುದೇ ವ್ಯಕ್ತಿ ಬಗ್ಗೆ ಟೀಕೆ ಮಾಡೋದಕ್ಕೆ ಹೋಗೋದಿಲ್ಲ. ವೈಯಕ್ತಿಕವಾಗಿ ಯಾರನ್ನೂ ಟಾರ್ಗೆಟ್ ಮಾಡಿ ಮಾತನಾಡೋದಿಲ್ಲ. ನನ್ನ ರಾಜಕಾರಣ ವ್ಯಕ್ತಿಗಳ ಮೇಲಲ್ಲ, ಅವರ ನೀತಿಗಳ ವಿರುದ್ಧ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಹಮಾದಾಬಾದ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ಟೀಕಿಸಿದ್ದಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅದಕ್ಕೆ ಸ್ಪಷ್ಟನೆ ನೀಡಿದ ಖರ್ಗೆ, ಗುಜರಾತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ವಿರುದ್ಧದ ಟೀಕೆಗಳನ್ನು ದುರುಪಯೋಗ ಮಾಡಿಕೊಳ್ತಿದೆ ಅಂತ ಆರೋಪಿಸಿದ್ರು.