NationalPolitics

White Paper; ಸಂಸತ್ತಿನಲ್ಲಿ ಶ್ವೇತಪತ್ರ ಮಂಡಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ; ಕಾಂಗ್ರೆಸ್‌ ನೇತೃತ್ವದ UPA ಆಡಳಿತದಲ್ಲಿ ಭಾರತದ ಆರ್ಥಿಕತೆ ಹೇಗಿತ್ತು ಎಂದು ತೋರಿಸುವುದಕ್ಕಾಗಿ ಕೇಂದ್ರ ಇಂದು ಶ್ವೇತ ಪತ್ರ ಹೊರಡಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಲೋಕಸಭೆಯಲ್ಲಿ ಶ್ವೇತಪತ್ರವನ್ನು ಮಂಡನೆ ಮಾಡಿದ್ದಾರೆ. 2004 ರಿಂದ 2014ರವರೆಗೆ ಮನಮೋಹನ್‌ ಸಿಂಗ್‌ ನೇತೃತ್ವದ UPA ಸರ್ಕಾರ ಆಡಳಿತ ನಡೆಸಿತ್ತು. ಅನಂತರ ಹತ್ತು ವರ್ಷ ಬಿಜೆಪಿ ನೇತೃತ್ವದ NDA ಸರ್ಕಾರ ಆಡಳಿತ ಮಾಡಿದೆ. ಎರಡೂ ಸರ್ಕಾರದ ಆಡಳಿತದ ಕಾಲದಲ್ಲಿ ದೇಶದ ಆರ್ಥಿಕ ನಿರ್ವಹಣೆ ಹೇಗಿತ್ತು ಎಂಬುದನ್ನು ಈ ಶ್ವೇತಪತ್ರದ ಮೂಲಕ ತೋರಿಸಲಾಗಿದೆ.

ಬಜೆಟ್‌ ಮಂಡನೆ ದಿನ ನಿರ್ಮಲಾ ಸೀತಾರಾಮನ್‌ ಏನು ಹೇಳಿದ್ದರು..?
ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಣಕಾಸಿನ ದುರುಪಯೋಗ ಹೇಗೆ ಆಗಿದೆ ಅನ್ನೋದನ್ನು ಈ ಶ್ವೇತಪತ್ರದಲ್ಲಿ ಎತ್ತಿ ತೋರಿಸಲಾಗುತ್ತದೆ. 2014ರವರೆಗೆ ನಮ್ಮ ದೇಶ ಎಲ್ಲಿತ್ತು, ಈಗ ದೇಶ ಎಲ್ಲಿದೆ ಎಂಬುದನ್ನು ನೋಡಬೇಕಾಗುತ್ತದೆ. ಆ ಹತ್ತು ವರ್ಷಗಳಲ್ಲಿ ನಡೆದ ದುರಾಡಳಿತದ ಪಾಠವನ್ನು ಕಲಿಯಬೇಕಾಗಿದೆ. ಹೀಗಾಗಿ ಮಂಡಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದರು.

ಕೇಂದ್ರ ಸರ್ಕಾರ ಹೊರಡಿಸಿರುವ ಶ್ವೇತಪತ್ರದಲ್ಲಿ ಏನಿದೆ..?
UPA ಅವಧಿಯಲ್ಲಿ ಹಣದುಬ್ಬರದಿಂದಾಗಿ ದೇಶಕ್ಕೆ ಹೊಡೆತ ಬಿದ್ದಿತ್ತು. ಐದು ವರ್ಷಗಳ ಕಾಲ ಹಣದುಬ್ಬರವಿತ್ತು. UPA ಅವಧಿಯಲ್ಲಿ ನಮ್ಮ ಕೈಗಾರಿಕೆಕೋದ್ಯಮಿಗಳು ದೇಶದಲ್ಲಿ ಹೂಡಿಕೆ ಮಾಡಲಿಲ್ಲ. ಬದಲಾಗಿ ಅವರು ವಿದೇಶದಲ್ಲಿ ಹೂಡಿಕೆ ಮಾಡಿದರು. ಆರ್ಥಿಕತೆಗೆ ಹುರುಪು ನೀಡುವಲ್ಲಿಯೂ UPA ಸರ್ಕಾರ ವಿಫಲವಾಯಿತು. ಹೂಡಿಕೆದಾರರನ್ನು ಓಡಿಸಲಾಯಿತು. 2004ರಲ್ಲಿ ಯುಪಿಎ ಆಡಳಿತ ಶುರುವಾದಾಗ ದೇಶದ ಆರ್ಥಿಕತೆ 8 ಪ್ರತಿಶತದಷ್ಟು ಬೆಳವಣಿಗೆ ಇತ್ತು. 2009 ಮತ್ತು 2014ರ ನಡುವೆ ದೇಶದಲ್ಲಿ ಹಣದುಬ್ಬರ ತುಂಬಾನೇ ಹೆಚ್ಚಾಗಿತ್ತು. ಇದರಿಂದಾಗಿ ದೇಶದ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆಯಾಯಿತು. ಹೀಗೆ ಹಲವು ವಿಚಾರಗಳನ್ನು ಶ್ವೇತಪತ್ರದಲ್ಲಿ ವಿವರವಾಗಿ ಹೇಳಲಾಗಿದೆ.

Share Post