Politics

ಸಿದ್ದರಾಮಯ್ಯರನ್ನು ಕೆಳಗಿಳಿಸುವ ಗ್ಯಾಂಗ್‌ ಕಾಂಗ್ರೆಸ್‌ ಪಕ್ಷದಲ್ಲೇ ಇದೆ; ವಿಪಕ್ಷ ನಾಯಕ ಆರ್‌.ಅಶೋಕ್‌

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಒಂದು ರೀತಿಯಲ್ಲಿ ಒಡೆದ ಮನೆ ಎನ್ನುವ ರೀತಿಯಲ್ಲಿದೆ.. ಸಿಎಂ ಸಿದ್ದರಾಮಯ್ಯ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸೋದಕ್ಕೆ ಅವರ ಪಕ್ಷದಲ್ಲೇ ಪ್ರಯತ್ನ ನಡೆಯುತ್ತಿದೆ.. ಸಿದ್ದರಾಮಯ್ಯ ವಿರುದ್ಧವಾಗಿ ಸಂಚು ನಡೆಸುವ ಗ್ಯಾಂಗ್‌ ಒಂದು ಅವರ ಪಕ್ಷದಲ್ಲೇ ಇದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.. ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಚುನಾವಣಾ ಸಿದ್ಧತಾ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಆರ್‌.ಅಶೋಕ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು..

ಶ್ಯಾಡೋ, ಸೂಪರ್‌ ಸಿಎಂಗಳು ಬಹಳ ಮಂದಿ ಇದ್ದಾರೆ;

ರಾಜ್ಯದಲ್ಲಿ ನರೇಂದ್ರ ಮೋದಿಯವರು ಹೇಳಿದಂತೆ ಸೂಪರ್‌ ಸಿಎಂಗಳು, ಶ್ಯಾಡೋ ಸಿಎಂಗಳು ತುಂಬಾ ಜನ ಇದ್ದಾರೆ.. ಇವರಲ್ಲೇ ಕೆಲವರು ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ.. ಹೀಗಾಗಿ ರಾಜ್ಯ ಕಾಂಗ್ರೆಸ್‌ ಒಡೆದ ಮನೆಯಾಗಿದೆ.. ಇದರಿಂದಾಗಿ ರಾಜ್ಯದಲ್ಲಿ ಅಅಭಿವೃದ್ಧಿ ಶೂನ್ಯವಾಗಿದೆ ಎಂದು ಆರ್‌.ಅಶೋಕ್‌ ಹೇಳಿದ್ದಾರೆ.. ಬಿ.ಕೆ.ಹರಿಪ್ರಸಾದ್‌ ಕೂಡಾ ಮಸಲತ್ತು ನಡೆಸುತ್ತಿದ್ದಾರೆ ಎಂದ ಆರ್‌.ಅಶೋಕ್‌, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..

ಕೇಂದ್ರದಲ್ಲಿ ಜನ ಸ್ಥಿರ ಸರ್ಕಾರ ಬಯಸಿದ್ದಾರೆ;

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲೇ ಸ್ಥಿರ ಸರ್ಕಾರ ಇರಬೇಕೆಂದು ಜನ ಬಯಸುತ್ತಿದ್ದಾರೆ.. ಅತಂತ್ರ ಅಥವಾ ಕಿಚಡಿ ಸರ್ಕಾರ ಜನಕ್ಕೆ ಬೇಕಾಗಿಲ್ಲ.. ಮೋದಿ ನೇತೃತ್ವದ ಸುಭದ್ರ ಸರ್ಕಾರದ ಪರವಾಗಿ ದೇಶದ ಜನ ಇದ್ದಾರೆ.. ರಾಜ್ಯದಲ್ಲಿ ಕೂಡಾ ಕಿಚಡಿ ಸರ್ಕಾರ ಇತ್ತು.. ಆಗ ಆ ಸರ್ಕಾರ ಹೇಗೆ ಪಚಡಿ ಆಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ.. ಹೀಗಾಗಿ ಜನ ಈ ಬಾರಿ ಮೋದಿ ನೇತೃತ್ವದ ಸರ್ಕಾರಕ್ಕೆ ಮತ ಹಾಕುತ್ತಾರೆ ಎಂದು ಆರ್‌.ಅಶೋಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐದು ವರ್ಷ ಸುಭದ್ರ ಹಾಗೂ ಭ್ರಷ್ಟಾಚಾರ ರಹಿತ ಸರ್ಕಾರ ನೀಡುವ ತಾಕತ್ತು ಇರುವುದು ಮೋದಿ ಒಬ್ಬರಿಗೇ. ಹೀಗಾಗಿ ಈ ಬಾರಿ ಭಾರೀ ಬಹುಮತದೊಂದಿಗೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಆರ್‌.ಅಶೋಕ್‌ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿರುವ ಸರ್ಕಾರ ನಾಲಾಯಕ್‌ ಸರ್ಕಾರ;

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದೆ.. ಈ ಸರ್ಕಾರ ಜನಕ್ಕೆ ದ್ರೋಹ ಮಾಡುತ್ತಿದೆ.. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‌ ದ್ವಂದ್ವ ನಿಲುವು ಪ್ರದರ್ಶನ ಮಾಡುತ್ತಿದೆ.. ಈ ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ.. ಜನ ಕುಡಿಯುವ ನೀರಿಗೆ ಒದ್ದಾಡುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದನೆ ಕೂಡಾ ಮಾಡುತ್ತಿಲ್ಲ. ಈ ಭ್ರಷ್ಟ ಸರ್ಕಾರಕ್ಕೆ ಜನ ಬೆಂಬಲ ನೀಡಲ್ಲ. ಬದಲಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ಅಶೋಕ್ ಹೇಳಿದರು.

ಬಿಜೆಪಿ, ಜೆಡಿಎಸ್ ಹಾಲು ಜೇನಿನಂತಿವೆ;

ರಾಜ್ಯದಲ್ಲಿ ಜೆಡಿಎಸ್‌ ಜೊತೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.. ನಾವು ಹಾಲು-ಜೇನಿನಂತೆ ಕೆಲಸ ಮಾಡಲಿದ್ದೇವೆ.. ನಮಗೆ ಮೋದಿ ನಾಯಕತ್ವ, ಎನ್​ಡಿಎ ಮೈತ್ರಿಕೂಟವಿದೆ. ಆದರೆ, ‘ಇಂಡಿಯಾ’ ಮೈತ್ರಿಕೂಟದಲ್ಲಿ ಯಾರೂ ಇಲ್ಲ ಎಂದು ಆರ್‌.ಅಶೋಕ್‌ ಹೇಳಿದರು.. ಇನ್ನು ಸುಮಲತಾ ಟಿಕೆಟ್‌ ವಿಚಾರಣವಾಗಿ ಮಾತನಾಡಿರುವ ಆರ್‌.ಅಶೋಕ್‌, ಅದನ್ನು ಹೈಕಮಾಂಡ್‌ ನಾಯಕರು ನಿರ್ಧಾರ ಮಾಡುತ್ತಾರೆ.. ಹೈಕಮಾಂಡ್‌ ನಾಯಕರೇ ಆ ವಿಚಾರವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

 

Share Post