Politics

ಕೊಡಗಿನಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪನಿಗೆ ಜಯದ ಹಾರ

ಕೊಡಗು:  ಕರ್ನಾಟಕ ರಾಜ್ಯದ ೨೫ ಕ್ಷೇತ್ರಗಳ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಕೈ, ತೆನೆ, ಕಮಲ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಹಾಗೂ ಬೀದರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಈಗ ಇವರ ಸಾಲಿಗೆ ಬಿಜೆಪಿ ಕೂಡಾ ಸೇರಿದೆ. ಕೊಡಗು ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪನವರು 705 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಡಾ.ಮಂಥರ್‌ಗೌಡಗೆ 603 ಮತಗಳನ್ನು ಪಡೆದಿದ್ದಾರೆ. 1,325 ಮತಗಳು ಚಲಾವಣೆಗೊಂಡಿದ್ದು ಅದರಲ್ಲಿ 17 ಮತಗಳು ತಿರಸ್ಕೃತಗೊಂಡಿವಾಗಿವೆ.

Share Post