ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾರೆಡ್ಡಿ ನೇಮಕ
ಬೆಂಗಳೂರು(Bengaluru); ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾರೆಡ್ಡಿಯವರನ್ನು ನೇಮಕ ಮಾಡಲಾಗಿದೆ.. ಸಚಿವ ರಾಮಲಿಂಗಾರೆಡ್ಡಿಯವರ ಪುತ್ರಿಯೂ ಆಗಿರುವ ಸೌಮ್ಯಾರೆಡ್ಡಿ ನೇಮಕದ ಪ್ರಸ್ತಾಪದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ.. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ..
ಇದನ್ನೂ ಓದಿ; ಮೀನೆಂದು ಭಾವಿಸಿ ಹಾವನ್ನು ಸುಟ್ಟು ತಿಂದರು!; ಮುಂದೇನಾಯ್ತು..?
2018ರ ವಿಧಾನಸಭಾ ಚುನಾವಣೆಯಲ್ಲಿ ಸೌಮ್ಯಾರೆಡ್ಡಿಯವರು ಜಯನಗರ ವಿಧಾನಸಭಾ ಕ್ಷೇತ್ರದಿಂ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು.. ಅನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು..
ಇದನ್ನೂ ಓದಿ; ವರಲಕ್ಷ್ಮೀ ವ್ರತಾಚರಣೆ ಹೇಗಿರಬೇಕು..?, ಪೂಜಾ ಸಮಯ ಏನು..?
ಹಾಲಿ ಅಧ್ಯಕ್ಷೆಯಾಗಿರುವ ಪುಷ್ಪಾ ಅಮರನಾಥ್ ಅವರ ಅವಧಿ ಮುಗಿದಿದ್ದಲ್ಲದೆ, ಅವರನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ರಾಜ್ಯ ಸಮಿತಿಯ ಉಪಾಧ್ಯಕ್ಷೆಯನ್ನಾಗಿ ಮಾಡಲಾಗಿದೆ.. ಒಬ್ಬರಿಗೆ ಒಂದೇ ಹುದ್ದೇ ಎಂಬ ನಿಯಮದ ಕಾರಣದಿಂದ ಸೌಮ್ಯಾರೆಡ್ಡಿಯವರನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ.. ವೀಣಾ ಕಾಶಪ್ಪನವರ್, ಐಶ್ವರ್ಯಾ ಮಹದೇವ್, ನಯನಾ ಮೋಟಮ್ಮ, ಕಮಲಾಕ್ಷಿ ರಾಜಣ್ಣ, ಕೃಪಾ ಅಮರ್ ಆಲ್ವಾ ಮುಂತಾದವರು ರೇಸ್‌ನಲ್ಲಿದ್ದರು.. ಆದ್ರೆ ಸೌಮ್ಯಾ ರೆಡ್ಡಿಗೆ ಅಧ್ಯಕ್ಷೆ ಪಟ್ಟ ಒಲಿದಿದೆ.