Politics

ಇದೆಂಥಾ ಅಭಿಮಾನ..?; ಮೈತುಂಬಾ ಖರ್ಗೆ ಸಾಧನೆಯ ಟ್ಯಾಟೂ..!

ಸಿನಿಮಾ ನಟರಿಗೆ, ರಾಜಕಾರಣಿಗಳು ಅಭಿಮಾನಿಗಳಿರುತ್ತಾರೆ.. ಕೆಲವರ ಅಭಿಮಾನ ಅತಿರೇಕಕ್ಕೆ ಹೋಗುತ್ತದೆ.. ಇಂತಹ ಅಭಿಮಾನಿಗಳು ತಮ್ಮ ನಾಯಕರ ಹೆಸರು ಅಥವಾ ಚಿತ್ರವನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.. ಈ ಮೂಲಕ ಅಭಿಮಾನ ಮರೆಯುತ್ತಾರೆ.. ಆದ್ರೆ ಇಲ್ಲೊಬ್ಬ ಖರ್ಗೆ ಅಭಿಮಾನಿ ಮೈತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ಬೆನ್ನ ಮೇಲೆ ಖರ್ಗೆ ಸಾಧನೆಯ ವಿವರ;

ಈತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಯಂತೆ.. ಅದು ಯಾವ ಮಟ್ಟಕ್ಕಿದೆ ಅಂದ್ರೆ, ಈತ ತನ್ನ ಮೈಮೇಲೆಲ್ಲಾ ಖರ್ಗೆ ಸಾಧನೆಯನ್ನು ಬಿಂಬಿಸುವ ಬರಹದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈತನ ಬೆನ್ನ ಮೇಲೆ ಮಲ್ಲಿಕಾರ್ಜುನ ಖರ್ಗೆ ಚುನಾವಣೆಯಲ್ಲಿ ಗೆದ್ದ ವಿವರ ಇಸ್ವಿ ಸಮೇತ ಟ್ಯಾಟೂ ಹಾಕಿಸಿಕೊಂಡಿದ್ದಾನೆ.. ಈತನ ಶರ್ಟ್‌ ಬಿಚ್ಚಿದರೆ ಖರ್ಗೆಯ ಸಾಧನೆಯ ಬಯೋಡೇಟಾ ಪೂರ್ತಿ ಸಿಗುತ್ತದೆ.

ಎದೆಯ ಮೇಲೆ ಖರ್ಗೆ, ಪ್ರಿಯಾಂಕ್‌ ಚಿತ್ರ;

ಇನ್ನು ಈತನ ಎದೆಯ ಎಡಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಫೋಟೋ ಟ್ಯಾಟೂ ಹಾಕಿಸಿಕೊಳ್ಳಲಾಗಿದೆ. ಬಲಭಾಗದಲ್ಲಿ ಪ್ರಿಯಾಂಕ್‌ ಖರ್ಗೆ ಫೋಟೋ ಹಾಕಲಾಗಿದೆ.. ಇದರ ಜೊತೆಗೆ ತಲೆ ಎಡಭಾಗದಲ್ಲಿ ಖರ್ಗೆ ಹೆಸರು ಮೇಲ್ಭಾಗದಲ್ಲಿ ಕಾಂಗ್ರೆಸ್‌ ಚಿಹ್ನೆ, ತಲೆಯ ಹಿಂಭಾಗದಲ್ಲಿ ಖರ್ಗೆ ಫೋಟೋ ಟ್ಯಾಟೂ ಹಾಕಲಾಗಿದೆ.

ಈ ಖರ್ಗೆಯನ್ನು ಅಭಿಮಾನಿಯನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮ್ನಾನಿಸಿದ್ದಾರೆ.

 

Share Post