Politics

26 ವರ್ಷಕ್ಕೇ ಸಂಸತ್‌ ಪ್ರವೇಶಿಸುತ್ತಿರುವ ಸಾಗರ್‌ ಖಂಡ್ರೆ; ಇವರು ದೇಶದಲ್ಲೇ ಕಿರಿಯ ಸಂಸದ!

ಬೀದರ್​; ದೇಶದಲ್ಲೇ ಅತ್ಯಂತ ಕಿರಿಯ ಸಂಸದರಾಗಿ ಕಾಂಗ್ರೆಸ್‌ನಿಂದ ಸಾಗರ ಖಂಡ್ರೆ ಆಯ್ಕೆಯಾಗಿದ್ದಾರೆ.. ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ ಖಂಡ್ರೆ ಬಿಜೆಪಿ ಭದ್ರಕೋಟೆ ಬೀದರ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿಜಯಮಾಲೆ ಧರಿಸಿದ್ದಾರೆ.. ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ ಅವರು 26 ವರ್ಷದ ಯುವಕನ ಮುಂದೆ ಸೋಲು ಕಂಡಿದ್ದಾರೆ.. 

26 ವರ್ಷದ ಸಾಗರ ಖಂಡ್ರೆ ಸಂಸತ್ತು ಪ್ರವೇಶಿಸಿದ ದೇಶದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿದ್ದಾರೆ. ಸಾಗರ ಖಂಡ್ರೆ ರಾಜಕೀಯ ಅನುಭವವಿರಲಿಲ್ಲ. ಶಾಲೆಗೆ ಹೋಗುವ ಹುಡುಗನಂತೆ ಇದ್ದಾರೆ.. ಬಿಜೆಪಿ ನಾಯಕರು ಇದೇ ವಿಚಾರವನ್ನು ಹೆಚ್ಚು ಪ್ರಚಾರ ಮಾಡಿದ್ದರು.. ಆದ್ರೆ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಿದ್ದು, ಲಿಂಗಾತರು ಸಾಗರ ಖಂಡ್ರೆ ಕೈ ಹಿಡಿದಿದ್ದಾರೆ..

 

Share Post