Politics

ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್‌ಗೆ ಫುಲ್‌ ಡಿಮ್ಯಾಂಡ್‌; ದೆಹಲಿಯಲ್ಲಿ ಗರಿಗೆದರಿದ ರಾಜಕೀಯ!

ನವದೆಹಲಿ; ಈಗ ಇಡೀ ದೇಶದ ರಾಜಕೀಯದ ಗಮನ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌  ಕಡೆ ನೆಟ್ಟಿದೆ.. ಚಂದ್ರಬಾಬು ನಾಯ್ದು ಅವರ ತೆಲುಗುದೇಶಂ ಪಾರ್ಟಿ 16 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದರೆ, ನಿತೀಶ್‌ ಕುಮಾರ್‌ ಅವರ ಜೆಡಿಯು ಪಾರ್ಟಿ 14 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದೆ.. ಎರಡೂ ಪಾರ್ಟಿ 30 ಸ್ಥಾನಗಳು ಈ ಬಾರಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಪ್ರಮುಖ ಪಾತ್ರ ವಹಿಸುತ್ತವೆ.. ಸದ್ಯ ಈ ಎರಡೂ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿವೆ.. ಆದ್ರೆ, ಇವರು ಹೊರಬಂದು INDIA ಒಕ್ಕೂಟ ಸೇರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ನಾಯಕರಿದ್ದಾರೆ.. ಇದಕ್ಕಾಗಿ ಮಾತುಕತೆಗಳು ಕೂಡಾ ಗರಿಗೆದರಿವೆ..

ಈಗಾಗಲೇ ಕಾಂಗ್ರೆಸ್‌ ನಾಯಕರು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ಜೊತೆ ಮಾತುಕತೆ ನಡೆಸಿದ್ದಾರೆ.. ಇದರ ಜೊತೆಗೆ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಕೂಡಾ ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಜೊತೆ ಮಾತುಕತೆ ನಡೆಸುತ್ತಿದ್ದಾರೆ.. ನಿತೀಶ್‌ ಕುಮಾರ್‌ ಅವರಿಗೆ ಉಪಪ್ರಧಾನಿ ಸ್ಥಾನ ಹಾಗೂ ಆಂಧ್ರಪ್ರದೇಶ ವಿಶೇಷ ಸ್ಥಾನಮಾನ ನೀಡುವ ಆಫರ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.. ಹಾಗೆ ನೋಡಿದರೆ INDIA ಮೈತ್ರಿಕೂಟ ರಚನೆ ಮಾಡುವಾಗ ಪ್ರಮುಖ ಪಾತ್ರ ವಹಿಸಿದ್ದವರು ನಿತೀಶ್‌ ಕುಮಾರ್‌ ಅವರು.. ಆದ್ರೆ ಕೊನೆಯ ಕ್ಷಣಗಳಲ್ಲಿ ಅವರು ಎನ್‌ಡಿಎ ಸೇರಿದ್ದರು.. ಆದ್ರೆ ನಿತೀಶ್‌ ಕುಮಾರ್‌ ಅನುಕೂಲಕ್ಕೆ ತಜಕ್ಕಂತೆ ವರ್ತನೆ ಮಾಡುವುದರಿಂದ ಮತ್ತೆ ಅವರು INDIA ಒಕ್ಕೂಟ ಸೇರಿದರೂ ಅಚ್ಚರಿಯಿಲ್ಲ.. ಹೀಗಾಗಿ ಬಿಜೆಪಿ ನಾಯಕರಿಗೂ ಈ ಬಗ್ಗೆ ಭೀತಿ ಇದೆ.. ಈ ಕಾರಣಕ್ಕಾಗಿ ಎನ್‌ಡಿಎ ನಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ..

 

Share Post