NationalPolitics

ಪ್ರಯಾಗ್‌ ರಾಜ್‌.. ಇದು ಪ್ರಧಾನಮಂತ್ರಿಗಳ ನಗರ; 7 ಪ್ರಧಾನಿಗಳು ಇಲ್ಲಿಯವರೇ..?

ಪ್ರಯಾಗ್‌ ರಾಜ್‌.. ಇದೊಂದು ಪವಿತ್ರ ಧಾರ್ಮಿಕ ಕೇಂದ್ರ.. ಗಂಗಾ, ಸರಸ್ವತಿ ಹಾಗೂ ಯಮುನಾ ನದಿಗಳ ಸಂಗಮ ಕೂಡಾ ಹೌದು.. ಇದನ್ನು ಈ ಮೊದಲು ಅಲಹಾಬಾದ್‌ ಅಂತಾ ಕರೆಯುತ್ತಿದ್ದರು.. ನಂತರದ ದಿನಗಳಲ್ಲಿ ಇದರ ಹಸರನ್ನು ಪ್ರಯಾಗ್‌ ರಾಜ್‌ ಎಂದು ಬದಲಾಯಿಸಲಾಇತು.. ಹಿಂದೂ ಧಾರ್ಮಿಕ ಯಾತ್ರಿಗಳನ್ನು ಆಕರ್ಷಿಸುವ ಈ ನಗರವನ್ನು ಸಂಗಮ ಅಂತಾನೂ ಕರೀತಾರೆ.. ಆದ್ರೆ ಇದಕ್ಕಿಂದ ಹೆಚ್ಚಾಗಿ ಈ ನಗರಕ್ಕೆ ಪ್ರಧಾನಮಂತ್ರಿಗಳ ನಗರ ಎಂಬ ಖ್ಯಾತಿ ಇದೆ.. ಯಾಕಂದ್ರೆ ನಮ್ಮ ದೇಶ ಕಂಡ 15 ಪ್ರಧಾನಿಗಳ ಪೈಕಿ 7  ಪ್ರಧಾನಿಗಳು ಈ ಪ್ರಯಾಗ್‌ ರಾಜ್‌ ನಗರಕ್ಕೆ ನೇರ ಸಂಬಂಧ ಹೊಂದಿದ್ದಾರೆ..

ಪ್ರಧಾನ ಮಂತ್ರಿಗಳ ನಗರವೆಂದೇ ಖ್ಯಾತಿ!;

   ಪ್ರಯಾಗ್‌ ರಾಜ್‌ ನಗರಕ್ಕೆ “ಪ್ರಧಾನಿಗಳ ನಗರ” ಎಂಬ ಹೆಸರಿದೆ.. ಯಾಕಂದ್ರೆ ಭಾರತದ ರಾಜಕೀಯ ಪರಂಪರೆಯೊಂದಿಗೆ ಈ ನಗರ ಬೆಸೆದುಕೊಂಡಿದೆ..  1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತವನ್ನು ಆಳಿದ 15 ಪ್ರಧಾನ ಮಂತ್ರಿಗಳಲ್ಲಿ ಪ್ರಭಾವಶಾಲಿ ಏಳು ಪ್ರಧಾನಿಗಳು ಈ ನಗರದೊಂದಿಗೆ ನೇರ ಸಂಬಂಧಗಳನ್ನು ಹೊಂದಿದ್ದಾರೆ. ಹೀಗಾಗಿ ಪ್ರಯಾಗ್‌ ರಾಜ್‌ ನಗರವನ್ನು “ಪ್ರಧಾನಿಗಳ ನಗರ” ಎಂದೇ ಕರೆಯಲಾಗುತ್ತದೆ..

ಪಂಡಿತ್ ಜವಾಹರಲಾಲ್ ನೆಹರು

ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು 1889 ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರದ ಸ್ವಾತಂತ್ರ್ಯದ ನಂತರದ ಆರಂಭಿಕ ವರ್ಷಗಳನ್ನು ರೂಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ನೆಹರೂ ಅವರು ಪ್ರಯಾಗರಾಜ್‌ನ ಫುಲ್‌ಪುರ ಕ್ಷೇತ್ರದಿಂದ ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿ

  ಸರಳತೆ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಶಾಸ್ತ್ರಿಯವರು 1957 ಮತ್ತು 1962 ರಲ್ಲಿ ಪ್ರಯಾಗರಾಜ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ತಮ್ಮ ಅಧಿಕಾರಾವಧಿಯಲ್ಲಿ “ಜೈ ಜವಾನ್, ಜೈ ಕಿಸಾನ್” ಎಂಬ ಪ್ರಸಿದ್ಧ ಘೋಷಣೆಯನ್ನು ಕೂಗಿದ್ದರು..

ಇಂದಿರಾ ಗಾಂಧಿ;

   ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರಿಗೂ ಪ್ರಯಾಗ್‌ ರಾಜ್‌ ನಗರದ ಜೊತೆ ಅವಿನಾಭಾವ ಸಂಬಂಧ ಇದೆ.. ಯಾಕಂದ್ರೆ ಅವರು ಹುಟ್ಟಿದ್ದು ಇದೇ ನಗರದಲ್ಲಿ.. ಅಷ್ಟೇ ಏಕೆ, ಫಿರೋಜ್ ಗಾಂಧಿಯವರೊಂದಿಗಿನ ಅವರ ವಿವಾಹವು ಅವರ ಪೂರ್ವಜರ ಮನೆಯಾಗಿದ್ದ ಪ್ರಯಾಗರಾಜ್‌ನಲ್ಲಿರುವ ಆನಂದ ಭವನದಲ್ಲಿ ನಡೆಯಿತು.

ರಾಜೀವ್ ಗಾಂಧಿ;

   ಭಾರತದ ಅತ್ಯಂತ ಕಿರಿಯ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿದ್ದ ರಾಜೀವ್ ಗಾಂಧಿ ಅವರು ಮುಂಬೈನಲ್ಲಿ ಜನಿಸಿದರು. ಆದರೆ ಪ್ರಯಾಗ್‌ ರಾಜ್‌ ನಗರದ ಜೊತೆ ಅವರು ಕೌಟುಂಬಿಕ ಸಂಪರ್ಕವನ್ನು ಹೊಂದಿದ್ದರು. ಅವರ ಕುಟುಂಬದ ಬೇರುಗಳು ಮತ್ತು ನಾನಿಹಾಲ್ (ತಾಯಿಯ ಅಜ್ಜಿಯರ ಮನೆ) ಪ್ರಯಾಜ್‌ ರಾಜ್‌ ನಲ್ಲಿತ್ತು.. ಹೀಗಾಗಿ ಅವರು ಬಾಲ್ಯದ ದಿನಗಳನ್ನು ಹೆಚ್ಚಾಗಿ ಪ್ರಯಾಗ್‌ ರಾಜ್‌ ನಲ್ಲಿ ಕಳೆದಿದ್ದರು..

ಗುಲ್ಜಾರಿಲಾಲ್ ನಂದಾ;

    ಗುಲ್ಜಾರಿಲಾಲ್ ನಂದಾ ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಪ್ರಯಾಗ್‌ರಾಜ್‌ನಲ್ಲಿ ಬೇರುಗಳನ್ನು ಹೊಂದಿರುವ ಪ್ರಮುಖ ರಾಜಕೀಯ ವ್ಯಕ್ತಿಯಾಗಿದ್ದರು. ಕಾರ್ಮಿಕ ಸಮಸ್ಯೆಗಳನ್ನು ಪರಿಹರಿಸಲು ನೀಡಿದ ಅವರ ಕೊಡುಗೆಗಳು ಅವಿಸ್ಮರಣೀಯ.

ವಿಶ್ವನಾಥ್ ಪ್ರತಾಪ್ ಸಿಂಗ್;

    ಭಾರತದ ಎಂಟನೇ ಪ್ರಧಾನಿ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಪ್ರಯಾಗ್‌ರಾಜ್‌ನಲ್ಲಿ ಜನಿಸಿದರು. ಅವರು ವಿದ್ಯಾರ್ಥಿ ನಾಯಕರಾಗಿದ್ದರು ಮತ್ತು ಅವರ ಕಾಲೇಜು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

ಚಂದ್ರ ಶೇಖರ್;

   ಭಾರತದ ಪ್ರಧಾನ ಮಂತ್ರಿಯಾಗಿ ಕೆಲಕಾಲ ಸೇವೆ ಸಲ್ಲಿಸಿದ ಚಂದ್ರ ಶೇಖರ್, ಪ್ರಯಾಗ್‌ ರಾಜ್‌ನ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.  ತಮ್ಮ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

Share Post