Politics

ಜಿ.ಟಿ. ದೇವೇಗೌಡ ವಿರುದ್ಧ ಸಾ.ರಾ.ಮಹೇಶ್ ಗೆ ಬೇಸರವೇಕೆ ಗೊತ್ತಾ?

ಬೆಂಗಳೂರು: ಎಂಎಲ್‌ಸಿ ಚುನಾವಣೆ ಕುರಿತು ಶಾಸಕ ಸಾ.ರಾ.ಮಹೇಶ್‌ ಮಾತನಾಡಿದರು. ಕಳೆದ ಬಾರಿ ತಾಲೂಕು ಪಂಚಾಯಿತಿಯ 150, ಜಿಲ್ಲಾ ಪಂಚಾಯಿತಿಯ 21 ಸದಸ್ಯರಿದ್ದರು‌. ಈಗ ತಾ‌ಪಂ, ಜಿಪಂ ಸದಸ್ಯರಿಲ್ಲ. ಬಿಜೆಪಿ ಸರ್ಕಾರ ನಾಮನಿರ್ದೇಶಿತ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿತ್ತು. ಹೀಗಿದ್ದೂ ನಮಗೂ ಬಿಜೆಪಿಗೂ 139 ಮತಗಳ ಅಂತರ ಇತ್ತು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಗಳಿಸಿದ್ದೇವೆ. ಕುಂಕುಮ ಕೊಟ್ಟರು, ದುಡ್ಡು ಕೊಟ್ಟರು ಅಂತಾ ನಮ್ಮ‌ ಶಾಸಕರೆ ಹೇಳಿದ್ದಾರೆ ಹಾಗಾದರೆ ನೀವೇನೂ ಕಡ್ಲೇಪುರಿ ಕೊಟ್ರಾ ಎಂದು ಪ್ರಶ್ನೆ ಮಾಡಿದರು. ಜೆಡಿಎಸ್ ಗೆ ಯಾರು ಅನಿವಾರ್ಯವಲ್ಲ. ಜೆಡಿಎಸ್ ನಮಗೆ ಅನಿವಾರ್ಯ. ನಮಗೆ ಈಗಲೂ ನಿಮ್ಮ ಮೇಲೆ ಗೌರವವಿದೆ. ಈಗಲೂ ನಮಗೆ ಅವರೇ ನಾಯಕರು. ಇಷ್ಟೆಲ್ಲಾ ನೋವು ಕೊಟ್ಟಿದ್ದಾರೆ. ಆದರೂ ನಾಯಕರು ಅಂತಾ ಒಪ್ಪಿಕೊಂಡಿದ್ದೇವೆ. ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ನೀವು ಶಾಸಕರಾಗಿರೋದು. ನಿಮ್ಮ ಅವಧಿ ಮುಗಿಯೋವರೆಗೂ ನೀವು ಪಕ್ಷದ ಪರವಾಗಿ ಇರಿ ಎಂದು ಜಿ.ಟಿ. ದೇವೇಗೌಡ ವಿರುದ್ಧ ಸಾ.ರಾ.ಮಹೇಶ್ ತಿರುಗೇಟು ನೀಡಿದರು.

̲̲̲̲̲̲̲̲̲̲̲̲̲̲̲̲̲̲̲̲̲̲̲̲̲̲

Share Post