25 ದಿನದಲ್ಲಿ 4 ಲಕ್ಷ ಬಾರಿ ಸಂಚಾರ ನಿಯಮ ಉಲ್ಲಂಘನೆ; ದಂಡ ವಸೂಲಿ ಎಷ್ಟು ಗೊತ್ತೇ..?
ಬೆಂಗಳೂರು; ಚುನಾವಣೆ ಸಮಯದಲ್ಲಿ ನೀತಿಸಂಹಿತೆ ಉಲ್ಲಘನೆ ಮಾಡೋದು, ಚುನಾವಣಾ ಅಕ್ರಮಗಳನ್ನು ನಡೆಸೋದನ್ನು ನೋಡೇ ಇರ್ತೀವಿ. ಆದ್ರೆ ಇವಿಷ್ಟೇ ಮಾಡೋದಿಲ್ಲ, ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಈ ಬಾರಿಯ ಚುನಾವಣೆ ವೇಳೆಯಲ್ಲಿ ಅಂದರೆ ಕಳೆದ 25 ದಿನಗಳಲ್ಲಿ ಸುಮಾರು 4 ಲಕ್ಷ 12 ಸಾವಿರದಷ್ಟು ಕೇಸ್ ಗಳು ದಾಖಲಾಗಿವೆ. ಅಂದರೆ ನಾಲ್ಕು ಲಕ್ಷ ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ರಾಜಕೀಯ ನಾಯಕರು, ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಟ್ರಾಫಿಕ್ ಪೊಲೀಸರು ಸುಮಾರು 22.89 ಕೋಟಿ ರೂ. ದಂಡ ವಿಧಿಸಿದ್ದಾರೆ. ರೋಡ್ ಶೋ, ಬೈಕ್ ರ್ಯಾಲಿಗಳನ್ನು ನಡೆಸಿದ ವೇಳೆ ಕೆಲವರು ಅತಿವೇಗದ ಚಾಲನೆ ಮಾಡಿದ್ದಾರೆ. ಕೆಲವರು ಸಿಗ್ನಲ್ ಜಂಪ್ ಮಾಡಿದ್ದಾರೆ. ಜೀಬ್ರಾ ಕ್ರಾಸಿಂಗ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ತ್ರಿಪಲ್ ರೈಡಿಂಗ್, ಹೆಲ್ಮೆಟ್ ರಹಿತ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತಾಡುವುದು ಕಂಡುಬಂದಿದೆ.
ಬೆಂಗಳೂರಿನ ಸುಮಾರು 250ಕ್ಕೂ ಹೆಚ್ಚಿನ ಜಂಕ್ಷನ್‌ಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ದಾಖಲಾದ ದೃಶ್ಯಗಳ ಆಧಾರದ ಮೇಲೆ ಕೇಸ್ ದಾಖಲಿಸಿ ದಂಡ ವಿಧಿಸಲಾಗಿದೆ.